Bengaluru, ಜನವರಿ 30 -- Pushpa 2 OTT: ಪುಷ್ಪ 2 ಇದೀಗ ಒಟಿಟಿ ಅನ್ನೂ ಬೃಹತ್‌ ಪುರವನ್ನು ಪ್ರವೇಶಿಸಿದೆ. ಮೂಲ ತೆಲುಗು ಜತೆಗೆ ತಮಿಳು, ಮಲಯಾಳಂ ಮತ್ತು ಹಿಂದಿ ಅವತರಣಿ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಆದರೆ, ಕನ್ನಡ ಅವತರಣಿಗೆ ಮಾತ್ರ ಇನ್ನೂ ಬಿಡುಗಡೆ ಆಗಿಲ್ಲ. ಈ ಮೂಲಕ ಮತ್ತೆ ಪುಷ್ಪ ತಂಡ ಮತ್ತು ನೆಟ್‌ಫ್ಲಿಕ್ಸ್‌ ಸಂಸ್ಥೆ ಕನ್ನಡ, ಕನ್ನಡಿಗರನ್ನು ಕಡೆಗಣಿಸಿತೇ ಎಂಬ ಚರ್ಚೆ ಇದೀಗ ಶುರುವಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನೆಟ್‌ಫ್ಲಿಕ್ಸ್‌ ಸಂಸ್ಥೆ, ಶೀಘ್ರದಲ್ಲಿ ಕನ್ನಡ ಅವತರಣಿಗೆ ವೀಕ್ಷಣೆಗೆ ಸಿಗಲಿದೆ ಎಂದಿದೆ. ಆದರೆ, ಇದರ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೆಟ್‌ಫ್ಲಿಕ್ಸ್‌ನ ಈ ನಿರ್ಧಾರಕ್ಕೆ ಸದ್ಯ ಕರುನಾಡಿನಲ್ಲಿ ಅಸಮಾಧಾನದ ಹೊಗೆ ಏಳುತ್ತಿದೆ. ಕೆಲವರು, ಕನ್ನಡ ಅವತರಣಿಗೆ ಪಟ್ಟು ಹಿಡಿದರೆ, ಇನ್ನು ಕೆಲವರು ಟೀಕೆಗಳನ್ನು ಮುಂದುವರಿಸಿದ್ದಾರೆ.

ಕಳೆದ ವರ್ಷದ ಬಹುನಿರೀಕ್ಷಿತ ಪುಷ್ಪ 2; ದಿ ರೂಲ್‌ ಸಿನಿಮಾ ಟಾಲಿವುಡ್‌ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿಯೇ ಹೊಸ ...