ಭಾರತ, ಫೆಬ್ರವರಿ 27 -- PURE EV PURE Perfect 10: ಹೋಳಿ, ಯುಗಾದಿ, ರಂಜಾನ್‌, ಈದ್ ಸೇರಿ ಹಲವು ಹಬ್ಬಗಳ ಸಂಭ್ರಮಾಚರಣೆ ನಡುವೆ, ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳ ಪೈಕಿ ಒಂದಾಗಿರುವ ಪ್ಯೂರ್ ಇವಿ ತನ್ನ ಗ್ರಾಹಕರಿಗಾಗಿ ಅತ್ಯಾಕರ್ಷಕ ಕ್ಯಾಶ್ ಬ್ಯಾಕ್ ಆಫರ್ ಪರಿಚಯಿಸಿದೆ. ಪ್ಯೂರ್ ಫರ್ಫೆಕ್ಟ್ 10 ಎಂಬ ರೆಫರಲ್‌ ಪ್ರೋಗ್ರಾಂ ಇದಾಗಿದ್ದು, ಇದು ಪ್ಯೂರ್ ಇವಿ ಗ್ರಾಹಕರಿಗೆ ಲಭ್ಯವಿದೆ ಎಂದು ಪ್ಯೂರ್ ಇವಿ ಕಂಪನಿಯ ಸಹ ಸಂಸ್ಥಾಪಕ, ಸಿಇಒ ರೋಹಿತ್ ವಡೇರಾ ತಿಳಿಸಿದ್ದಾರೆ.

ಶಿವರಾತ್ರಿ ಸಂದರ್ಭದಲ್ಲೇ ಪ್ಯೂರ್ ಇವಿ ಕಂಪನಿಯು ಪ್ಯೂರ್ ಫರ್ಫೆಕ್ಟ್ 10 ರೆಫರಲ್ ಪ್ರೋಗ್ರಾಂ ಅನ್ನು ಶುರುಮಾಡಿದೆ. ಈ ಯೋಜನೆಯು ಪ್ಯೂರ್ ಇವಿ ಕಂಪನಿಯ ಹೊಸ ಗ್ರಾಹಕರಿಗೂ ಲಭ್ಯವಿದ್ದು, ಗರಿಷ್ಠ ಮಾರ್ಚ್ 31 ರ ತನಕ ಅಥವಾ ಸ್ಟಾಕ್ ಇರುವ ತನಕ ಜಾರಿಯಲ್ಲಿರುತ್ತದೆ. ಪ್ಯೂರ್ ಇವಿ ವಾಹನ ಖರೀದಿಸುವ ಹೊಸ ಗ್ರಾಹಕರು ಅಥವಾ ಸಂಬಂಧಿತ ಮಳಿಗೆಗಳಲ್ಲಿ ಸ್ಟಾಕ್ ಇರುವ ತನಕ ಈ ರೆಫರಲ್ ಯೋಜನೆ ಜಾರಿಯಲ್ಲಿರುತ್ತದೆ ಎಂದು ರೋಹಿತ್ ವಡೇರಾ ತ...