ಭಾರತ, ಫೆಬ್ರವರಿ 18 -- ಹೈದರಾಬಾದ್‌: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಪ್ಯೂರ್ ಇವಿ ಇದೀಗ ತನ್ನ ಎಲೆಕ್ನಿಕ್ ವಾಹನಗಳಲ್ಲಿ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಮತ್ತು ಟೆಲಿಮ್ಯಾಟಿಕ್ಸ್ ಅನ್ನು ಸಂಯೋಜಿಸುವ ಉದ್ದೇಶದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಅಂಗಸಂಸ್ಥೆಯಾದ ಜಿಯೋಥಿಂಗ್ಸ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆಗೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಅತ್ಯಾಧುನಿಕ ಐಓಟಿ ಉತ್ಪನ್ನಗಳು, ಅತ್ಯುತ್ತಮ ಕನೆಕ್ಟಿವಿಟಿ ಮತ್ತು ಡಿಜಿಟಲ್ ಏಕೀಕರಣದ ಮೂಲಕ ಬಳಕೆದಾರರಿಗೆ ಅತ್ಯುತ್ಕೃಷ್ಟ ರೈಡಿಂಗ್ ಅನುಭವ ಒದಗಿಸುವ ಗುರಿಯನ್ನು ಹೊಂದಿದೆ.

ಪ್ಯೂ‌ರ್ ಇವಿ ಸಂಸ್ಥೆಯು ಜಿಯೋಥಿಂಗ್ಸ್ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಗಳನ್ನು ತನ್ನ ಉತ್ಪನ್ನಗಳಲ್ಲಿ ಬಳಸಿಕೊಳ್ಳಲು ಯೋಜಿಸಿದ್ದು, ಈ ವ್ಯವಸ್ಥೆಯು ಐಓಟಿ ಉತ್ಪನ್ನಗಳನ್ನು ಒಳಗೊಂಡಿದೆ. ತನ್ನ ಎಲೆಕ್ನಿಕ್ ದ್ವಿಚಕ್ರ ವಾಹನಗಳಲ್ಲಿ ಐಓಟಿ ಉತ್ಪನ್ನಗಳನ್ನು ಬಳಸಿಕೊಳ್ಳುವ ಮೂಲಕ ವಾಹನಗಳ ಕಾರ್ಯನಿರ್ವಹಣೆ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ನಡೆಯಲಿದ...