ಭಾರತ, ಮಾರ್ಚ್ 17 -- Puneeth Rajkumar Birthday: ಇಂದು ಮಾರ್ಚ್ 17ರಂದು ದಿವಂಗತ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಸಾಕಷ್ಟು ಜನ ಈ ಸಂದರ್ಭದಲ್ಲಿ ಅಪ್ಪು ಇರಬೇಕಿತ್ತು ಎಂದೇ ಅಂದುಕೊಳ್ಳುತ್ತಿರುತ್ತಾರೆ. ಅಪ್ಪು ಅಭಿಮಾನಿಗಳಿಗೆ ಜನ್ಮದಿನವನ್ನು ಸಂಭ್ರಮಿಸಬೇಕೋ ಅಥವಾ ದುಃಖಿಸಬೇಕೋ ಎಂದು ಅರ್ಥ ಆಗದ ಪರಿಸ್ಥಿತಿ ಇದು. ಆದರೂ ಸಾಕಷ್ಟು ಅಭಿಮಾನಿಗಳು ಅಪ್ಪುವನ್ನು ನೆನೆದು ಖುಷಿಯಿಂದಲೇ ಅಪ್ಪುವನ್ನು ಆರಾಧಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪುನೀತ್ ಅವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಕಿರುತೆರೆಗಳಲ್ಲೂ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ ನಿಮಿತ್ತ, ಪುನೀತ್‌ ರಾಜ್‌ಕುಮಾರ್ ಚಿತ್ರಗಳು ಇರುವಂತಹ ವಿಶೇಷ ಅಂಚೆಕಾರ್ಡ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜೀ ಕನ್ನಡ ವಾಹಿನಿಯು ಸರಿಗಮಪದಲ್ಲಿ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಿದೆ. ಅಪ್ಪು ಸಿನಿಮಾ ಮತ್ತೆ ಬಿಡುಗಡೆಯಾಗಿದೆ. ಹೀಗೆ ಈಗಾಗಲೇ ಪುನೀತ್ ಜನ್ಮದಿನವನ್ನು ಎಲ್ಲರೂ ಆಚರಿಸ...