ಭಾರತ, ಫೆಬ್ರವರಿ 4 -- ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿ, ಸಾಕಷ್ಟು ಜನರ ನೆಚ್ಚಿನ ನಟನಾಗಿ ಜೀವಿಸಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಾರೆ. ಆದರೆ ಅಪ್ಪು ಇಲ್ಲವಾದ ದಿನದಿಂದ ಇಂದಿನವರೆಗೂ ಅವರಿಲ್ಲ ಎಂಬ ನೋವು ಮಾತ್ರ ಸದಾ ಕಾಡುತ್ತದೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ನೆನೆಯುತ್ತಾರೆ. 'ನೀನೆ ನೀನೆ ರಾಜಕುಮಾರ' ಎಂಬ ಹಾಡೊಂದು ಜನವರಿ 26ರಂದು ಬಿಡುಗಡೆಯಾಗಿದೆ. ಇದುವರೆಗೆ (ಫೆಬ್ರವರಿ 4) ಎಂಟು ಸಾವಿರಕ್ಕೂ ಅಧಿಕ ಜನರು ಈ ವಿಡಿಯೋ ಸಾಂಗ್‌ ವೀಕ್ಷಿಸಿದ್ದಾರೆ. ಆ ಹಾಡಿನ ಸುಂದರ ಸಾಲುಗಳನ್ನು ನಾವಿಲ್ಲಿ ನೀಡಿದ್ದೇವೆ.

ಕೋಟಿ ಕನ್ನಡ ಉಸಿರ

ಅಧಿಕಾರಿ ನೀನೇ

ನೀನೆ ನೀನೆ ರಾಜಕುಮಾರ

ಮನದ ಮಂದಿರ ತುಂಬ

ನಿನ್ನ ನಗುವೇನೆ

ನೀನೆ ನೀನೆ ರಾಜಕುಮಾರ

ತಿರುಗೋಕೆ ಭೂಮಿ

ಆ ಆ ಆ ಆ.

ಆ ಸೂರ್ಯ ಬೇಕು

ಹಮ್ಮಿಂಗ್/ಸ್ವರಸ್

ತಿರುಗೋಕೆ ಭೂಮಿಗೆ

ಆ ಸೂರ್ಯ ಬೇಕು

ಅಭಿಮಾನಕ್ಕೆ ನೀನೆ ಸಾಕು, ರಾಜಕುಮಾರ....

ನೀನೆ ನೀನೆ ನೀ...