Bengaluru, ಮಾರ್ಚ್ 17 -- Puneeth Rajkumar Birthday: ಕನ್ನಡದ ಖ್ಯಾತ ನಿರೂಪಕಿ ಆಂಕರ್‌ ಅನುಶ್ರೀ ಪವರ್‌ ಸ್ಟಾರ್‌, ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ. ಸ್ವತಃ ಪುನೀತ್‌ ಬದುಕಿದ್ದಾಗಲೇ, ಈ ಬಗ್ಗೆ ಸಾಕಷ್ಟು ಸಲ ಪುನೀತ್‌ ಅವರ ಬಳಿಯೇ ಹೇಳಿಕೊಂಡಿದ್ದರು ಅನುಶ್ರೀ. ಅವರ ಸೋಷಿಯಲ್‌ ಮೀಡಿಯಾ ಪುಟದಲ್ಲಿಯೂ ಪುನೀತ್‌ ಅವರ ಜತೆಗಿನ ನೆನಪುಗಳನ್ನು ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನ ಲೋಗೋದಲ್ಲೂ ಪುನೀತ್‌ ಇದ್ದಾರೆ. ಇದೀಗ ಇದೇ ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಬರ್ತ್‌ಡೇ ಪ್ರಯುಕ್ತ ವಿಶೇಷ ಕವನವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಪರಮಾತ್ಮನನ್ನು ಕಸಿದುಕೊಂಡ ಭಗವಂತನಿಗೇ ಶಾಪ ಹಾಕಿದ್ದಾರೆ ಅನುಶ್ರೀ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬದುಕಿದ್ದಿದ್ದರೆ ಇಂದಿಗೆ (ಮಾ. 17) ಅವರಿಗೆ 50 ವರ್ಷ ತುಂಬುತ್ತಿತ್ತು. ಹೊಸ ಹೊಸ ಸಿನಿಮಾಗಳ ಅಪ್‌ಡೇಟ್‌ಗಳ ಜತೆಗೆ, ಅಭಿಮಾನಿಗಳಿಗೆ ಹತ್ತು ಹಲವು ಸರ್ಪ್ರೈಸ್‌ಗಳು ಸಿಕ್ಕಿರುತ್ತಿದ್ದವು. ಅವರ ಅನುಪಸ್ಥಿತಿಯ ನ...