ಭಾರತ, ಫೆಬ್ರವರಿ 14 -- 2019ರ ಇದೇ ದಿನ ಅಂದರೆ ಫೆಬ್ರುವರಿ 14 ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿದ್ದರೆ ಭಾರತಕ್ಕೆ ಮಾತ್ರ ಅಂದು ಕರಾಳ ದಿನವಾಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಅಂದು ನಡೆದ ಭೀಕರ ಭಯೋತ್ಪಾದಕ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಪ್ರಾಣ ತೆತ್ತಿದ್ದರು. ಅಂದಿನಿಂದ ಭಾರತದಲ್ಲಿ ಫೆಬ್ರುವರಿ 14 ಅನ್ನು ಬ್ಲ್ಯಾಕ್ ಡೇ ಅಥವಾ ಕರಾಳ ದಿನ ಎಂದು ಆಚರಿಸಲಾಗುತ್ತಿದೆ.

2019ರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಫೆಬ್ರುವರಿ 14 ಅನ್ನು ಕರಾಳ ದಿನ ಎಂದು ಆಚರಿಸಲಾಗುತ್ತದೆ. ಅಂದು ಮಧ್ಯಾಹ್ನ 3.15ರ ಸುಮಾರಿಗೆ ಉಗ್ರರು ಎಸಗಿದ ದುಷ್ಕೃತ್ಯಕ್ಕೆ ಭಾರತೀಯ ಸೈನಿಕರು ತಮ್ಮ ಉಸಿರು ಚೆಲ್ಲಿದ್ದರು. ಈ ದಾಳಿಯ ದಿನವು ಭೀಕರ ದಿನವಾಗಿ ಇತಿಹಾಸದ ಪುಟ ಸೇರಿತು. ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿದ್ದ ಭಾರತೀಯರಿಗೆ ಈ ದಿನವು ಮರೆಯಲಾಗದ ನೋವು ನೀಡಿತ್ತು.

ಈ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾ...