ಭಾರತ, ಫೆಬ್ರವರಿ 3 -- ದೇವರನ್ನು ಆರಾಧಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ, ಇದರಿಂದ ಮನೆ-ಮನದಲ್ಲಿ ಸಂತೋಷ ನೆಲೆಸುತ್ತದೆ ಎಂಬುದು ನಂಬಿಕೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೇವರಿಗೆ ಹೂ ಇಟ್ಟು, ದೀಪ ಬೆಳಗಿಸುವ ಸಂಪ್ರದಾಯ ಬಹಳಷ್ಟು ಕಡೆಗಳಲ್ಲಿದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗಿ, ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಇರಲಿ, ಪ್ರತಿ ಪೂಜೆಗೂ ಹೂವು ಸೇರಿ ಕೆಲವು ವಸ್ತುಗಳು ಇರಲೇಬೇಕು ಎನ್ನುವ ನಿಯಮಗಳಿವೆ. ಆದರೆ ಪೂಜೆಗೆ ಹೂಗಳನ್ನು ಬಳಸುವ ಮುನ್ನ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಆ ನಿಯಮಗಳನ್ನು ಪಾಲಿಸುವುದು ಅವಶ್ಯ. ಅವುಗಳಲ್ಲಿ ದೇವರಿಗೆ ಯಾವ ಹೂ ಇಡಬಾರದು, ಪೂಜೆಗೂ ಮುನ್ನ ಹೂವಿನ ಸುವಾಸನೆಯನ್ನು ಅಘ್ರಾಣಿಸುವುದು ತಪ್ಪು ಎಂಬ ನಿಯಮಗಳೂ ಸೇರಿವೆ.

ದೇವರ ಪೂಜೆಗೆ ಕಟ್ಟುನಿಟ್ಟಿನ ನಿಯಮಗಳಿರುವಂತೆ, ಹೂಗಳ ಬಳಕೆಗೂ ಕೆಲವು ನಿಯಮಗಳಿವೆ. ಇವು ಕಟ್ಟುನಿಟ್ಟಿನ ನಿಯಮಗಳಾಗಿದ್ದು, ದೇವರು ಸಂತುಷ್ಠಿಗೊಂಡು ಆ...