ಭಾರತ, ಏಪ್ರಿಲ್ 8 -- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದ ಈಕೆ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ವಿದ್ಯಾರ್ಥಿನಿ. ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಿಲೇಬಸ್‌ ರಿವೈಸ್‌ ಮಾಡುವುದು ತುಂಬಾ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಂಜಿನಿಯರಿಂಗ್‌ ಓದಿ ಟೆಕ್ನಾಲಜಿ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಕನಸು ಈಕೆಗಿದೆ. ಇವರು ಕೇವಲ ಓದಿನಲ್ಲಿಯೇ ಮುಳುಗುವ ವಿದ್ಯಾರ್ಥಿನಿಯಲ್ಲ. ಹಲವು ಹವ್ಯಾಸ ಆಸಕ್ತಿಗಳನ್ನೂ ಹೊಂದಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಮಾಡಿದ್ದಾರೆ.

"ಫಲಿತಾಂಶದಿಂದ ನನಗೆ ಖುಷಿಯಾಗಿದೆ. ನಮಗೆ ಕಾಲೇಜು ಸಂಜೆ 7 ಗಂಟೆಯವರೆಗೂ ಇರುತ್ತಿತ್ತು. ಕಾಲೇಜಿನಲ್ಲಿ ಮಾಡಿದ ಪಾಠಗಳನ್ನು ಚೆನ್ನಾಗಿ ರಿವೈಸ್ ಮಾಡುತ್ತಿದ್ದೆ. ನಾನು ಎಲ್ಲ ಪ್ರಿಪರೇಟರಿ ಪೇಪರ್‌ಗಳನ್ನು ಬೆಸ್ಟ್ ಎನ್ನುವಂತೆ ಬರೆಯುತ್ತಿದ್ದೆ. ಕಾಲೇಜಿನಲ್ಲಿ ಸಾಕಷ್ಟು ಯೂನಿಟ್ ಟೆಸ್ಟ್‌ ಮಾಡುತ್ತಿದ್ದರು. ನಾನು ಸ್ಪೋರ್ಟಿವ್ ಆಗಿ ಬರೆದೆ. ಕಡಿಮೆ ಎಂದರೆ ಒಟ್ಟು 5 ಸ...