ಭಾರತ, ಏಪ್ರಿಲ್ 8 -- PUC Toppers 2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ವಿಜ್ಞಾನ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಪಡೆದಿದ್ದಾರೆ. ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜು ವಿದ್ಯಾರ್ಥಿನಿ ದೀಕ್ಷಾ ಆರ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಾನು ಕಷ್ಟಪಟ್ಟು ಓದಲಿಲ್ಲ, ಇಷ್ಟಪಟ್ಟು ಓದಿದೆ ಎಂದು ಅವರು ತಮ್ಮ ಯಶಸ್ಸಿನ ಗುಟ್ಟು ಹೇಳಿದ್ದಾರೆ.

"ಈ ಯಶಸ್ಸು ಪಡೆಯಲು ಕಾಲೇಜಿನವರು ಮತ್ತು ಪೋಷಕರ ಆಶೀರ್ವಾದ ಪ್ರಮುಖ ಕಾರಣ. ನಾನು ಎಲ್ಲಿಯೂ ಕೋಚಿಂಗ್‌ಗೆ ಹೋಗಿಲ್ಲ. ವಿಡಿಯೊಗಳ ನೆರವು ಪಡೆದುಕೊಂಡೆ. ನಾನು ಕಷ್ಟಪಟ್ಟು ಓದಲಿಲ್ಲ, ಇಷ್ಟಪಟ್ಟು ಓದುತ್ತಿದ್ದೆ. ಕಾಲೇಜಿನಲ್ಲಿ ಪಾಠ ಮಾಡುವಾಗ ನೋಟ್ಸ್‌ ತೆಗೆದುಕೊಳ್ಳುತ್ತಿದ್ದೆ. ಮನೆಗೆ ಬಂದು ಅದರ ಮೇಲೆ ಕಣ್ಣಾಡಿಸಿ ರಿವೈಸ್ ಮಾಡುತ್ತಿದ್ದೆ" ಎಂದು ದೀಕ್ಷಾ ಆರ್‌ ಹೇಳಿದ್ದಾರೆ.

"ಮಲ್ಟಿಪಲ್ ಚಾಯ್ಸ್‌ ಈ ಸಲ ರಿಯಲ್ ಚಾಲೆಂಜ್ ಇತ್ತು. ನಾನು ಸಿಇಟಿ ಮತ್ತು ನೀಟ್‌ ಪತ್ರಿಕೆಗಳನ್ನು ಬಿಡಿಸುತ್ತಿದ್ದೆ. ಹೀಗಾಗಿ ನನಗೆ ಸಹಾಯವಾಯಿತು. ...