Bangalore, ಫೆಬ್ರವರಿ 21 -- ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲು ಏರುತ್ತಿರುವ ನಡುವೆಯೇ ಪರೀಕ್ಷಾ ಚಟುವಟಿಕೆಗಳೂ ಬಿರುಸುಗೊಳ್ಳುತ್ತಿವೆ. ಮುಖ್ಯ ಪರೀಕ್ಷೆಗಳು ಎಂದೇ ಪರಿಗಣಿತವಾಗುವ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಸಿದ್ದತೆಗಳು ನಡೆದಿವೆ ಮಾರ್ಚ್‌ ತಿಂಗಳಿನಲ್ಲಿ ಪಿಯುಸಿ ಪರೀಕ್ಷೆಗಳು, ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 7,13.862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 3,35,468 ವಿದ್ಯಾರ್ಥಿಗಳು ಮತ್ತು 3,78,389 ವಿದ್ಯಾರ್ಥಿನಿಯರು ಮತ್ತು 5 ದ್ವಿಲಿಂಗಿಗಳಿದ್ದಾರೆ. 7.13 ಲಕ್ಷ ವಿದ್ಯಾರ್ಥಿಗಳಲ್ಲಿ 2.9 ಲಕ್ಷ ವಿಜ್ಞಾನ ವಿಭಾಗ, 2.2 ಲಕ್ಷ ವಾಣಿಜ್ಯ ಮತ್ತು 1.9 ಲಕ್ಷ ಕಲಾ ವಿಭಾಗದ ವಿದ್ಯಾರ್ಥಿಗಳು ಸೇರಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಇವರಲ್ಲಿ 4,61,563 ಬಾಲಕರು ಮತ್ತು 4,34.884 ಬಾಲಕಿಯರಿದ್ದಾರೆ ಎಂದು ಕರ್ನಾಟಕ ಪರೀಕ...