Bangalore, ಏಪ್ರಿಲ್ 8 -- Puc Scanned Copy: ದ್ವಿತೀಯ ಪಿಯುಸಿ ಒಂದು ದಶಕದ ಅವಧಿಯಲ್ಲೇ ಮೊದಲ ಬಾರಿಗೆ ಬೇಗನೇ ಪ್ರಕಟವಾಗಿದೆ. ಹಿಂದೆಲ್ಲಾ ಮೇ ತಿಂಗಳಲ್ಲಿ ಪ್ರಕಟಿಸುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್‌ನಲ್ಲೇ ಬಂದಿದೆ. ಉತ್ತಮ ಫಲಿತಾಂಶ ಬಂದಿದ್ದರೂ ಕಡಿಮೆ ಅಂಕ ಪಡೆದವರು ಮರುಮೌಲ್ಯಮಾಪನ ಹಾಗೂ ಮರುಎಣಿಕೆ, ಸ್ಕ್ಯಾನ್ಡ್‌ ಪ್ರತಿ ಪಡೆಯಲು ಅವಕಾಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧುಬಂಗಾರಪ್ಪ ಅವರು ಮರು ಎಣಿಕೆ. ಎರಡನೇ ಪರೀಕ್ಷೆ ಸಹಿತ ಹಲವು ವಿಚಾರಗಳನ್ನು ಪ್ರಕಟಿಸಿದರು. ಏಪ್ರಿಲ್‌ ತಿಂಗಳಿನಲ್ಲಿಯೇ ಈ ಪ್ರಕ್ರಿಯೆಗಳು ಶುರುವಾಗಲಿವೆ ಎಂದು ತಿಳಿಸಿದ್ದಾರೆ.

ಹೆಚ್ಚು ಅಂಕ ಬರಬೇಕಿತ್ತು, ಆದರೆ ಕಡಿಮೆ ಬಂದಿದೆ ಎನ್ನುವ ಅನುಮಾನವಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 8 ರಿಂದ ಏಪ್ರಿಲ್ 13 ರವರೆಗೆ ಅವಕಾಶ...