Bangalore, ಏಪ್ರಿಲ್ 8 -- Scholarships: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್‌ 8ರಂದು ಮಧ್ಯಾಹ್ನ 1 ಗಂಟೆಗೆ ಪ್ರಕಟಿಸುತ್ತಿದೆ. ಮಾರ್ಚ್‌ 1ರಿಂದ ಮಾರ್ಚ್‌ 20ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿವೆ. https://karresults.nic.in/ ವೆಬ್‌ಸೈಟ್‌ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಸಾಕಷ್ಟು ಜನರು ಉತ್ತಮ ವೇತನ ಪಡೆಯುವ ಕರಿಯರ್‌ ರೂಪಿಸಿಕೊಳ್ಳಲು ಕನಸು ಕಾಣುತ್ತಿರಬಹುದು. ವಿವಿಧ ಕೋರ್ಸ್‌ಗಳಿಗೆ ಸೇರಲು ಬಯಸಬಹುದು. ಆದರೆ, ಕರ್ನಾಟಕದಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ಇದ್ದಾರೆ. ಓದುವ ಕನಸು ಇದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಮುಂದೆ ಓದುವುದು ಬೇಡ ಎಂದು ನಿರ್ಧರಿಸಿರಬಹುದು. ಆದರೆ, ಕಲಿಯಲು ಆಸಕ್ತಿ ಇರುವವರಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳು ಇವೆ. ಒಂದಿಷ್ಟು ಕಷ್ಟ ಸಹಿಸಿಕೊಂಡರೆ ತಮ್ಮ ಕನಸಿನ ಶಿಕ್ಷಣವನ್ನು ಪಡೆಯಬಹುದು. ಕೆಲವೊಮ...