ಭಾರತ, ಏಪ್ರಿಲ್ 8 -- ವಿದ್ಯಾರ್ಥಿಗಳು ಮತ್ತು ಪೋಷಕರ ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಏಪ್ರಿಲ್ 8, ಮಂಗಳವಾರ) ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಾರೆ. ಅದರಲ್ಲೂ ಕಲಾ ವಿಭಾಗದಲ್ಲಿ ಉತ್ತೀರ್ಣರಾದವರು ಯಾವ ಕೋರ್ಸ್ ತೆಗೆದುಕೊಂಡರೆ ಭವಿಷ್ಯದಲ್ಲಿ ಹೆಚ್ಚು ಅನುಕೂಲ ಇರುತ್ತೆ. ಹೆಚ್ಚು ಸ್ಕೋರ್ ಮಾಡಬಹುದಾದ ಕೋರ್ಸ್ ಗಳು, ಬೇಗ ಉದ್ಯೋಗ ಗಿಟ್ಟಿಸಿಕೊಳ್ಳುವಂತಹ ಕೋರ್ಸ್ ಹಾಗೂ ಕಡಿಮೆ ವೆಚ್ಚದ ಕೋರ್ಸ್ ಗಳ ವಿವರಗಳನ್ನು ಇಲ್ಲಿ ತಿಳಿಯೋಣ.

ದ್ವಿತೀಯ ಪಿಯುಸಿ ಫಲಿತಾಂಶದ ಬಳಿಕ ಪದವಿ ಮಾಡಲು ಒಂದು ನಿರ್ದಿಷ್ಟವಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇಂತಹ ಸಮಯದಲ್ಲಿ ಹತ್ತಾರು ಯೋಚನೆಗಳು ತಲೆಗೆ ಬರುತ್ತವೆ. ಹೀಗಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪಿಯುಸಿ ಆರ್ಟ್ಸ್ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪದವಿಯಲ್ಲಿ ಯಾವ ಕೋರ್ಸ್ ಗಳನ್ನು ತೆಗೆದ...