ಭಾರತ, ಫೆಬ್ರವರಿ 8 -- ವ್ಯಾಲೆಂಟೆನ್ಸ್ ವೀಕ್ ಆರಂಭವಾಗಿದೆ. ನಿನ್ನೆ ರೋಸ್ ಡೇ ಅಂದರೆ ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನ. ಇಂದು ವ್ಯಾಲೆಂಟೈನ್ಸ್ ವೀಕ್‌ನ ಎರಡನೇ ದಿನ, ಈ ದಿನ ಪ್ರಪೋಸ್ ಡೇ. ಪ್ರೇಮಿಗಳ ವಾರದ ಪ್ರತಿ ದಿನಕ್ಕಿಂತ ಈ ದಿನವನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ.

ನೀವು ಯಾರನ್ನಾದರೂ ಪ್ರೀತಿ ಮಾಡುತ್ತಿದ್ದರೆ ನಿಮ್ಮ ಮನದ ಮಾತನ್ನು ಅಭಿವ್ಯಕ್ತಪಡಿಸಲು ಈ ದಿನ ಸೂಕ್ತ. ಸಾಕಷ್ಟು ಮಂದಿ ಪ್ರೇಮ ನಿವೇದನೆ ಮಾಡಲು ಫೆಬ್ರುವರಿ ತಿಂಗಳಿಗಾಗಿ ಕಾಯುತ್ತಿರುತ್ತಾರೆ.

ಪ್ರತಿವರ್ಷ ಪ್ರೇಮಿಗಳ ದಿನಕ್ಕೂ ಮುನ್ನ ಅಂದರೆ ಫೆ. 8 ರಂದು ಪ್ರಪೋಸ್‌ ಡೇ ಆಚರಿಸಲಾಗುತ್ತದೆ. ಈ ದಿನವು ಪ್ರೀತಿ, ಒಲವು, ಬದ್ಧತೆಯನ್ನು ನಿರೂಪಿಸುವ ದಿನ. ತಮ್ಮ ಪ್ರೇಮ ಪಯಣಕ್ಕೆ ಹೊಸ ಹೆಜ್ಜೆ ಇಡಲು ಬಯಸುವವರಿಗೆ ಇದು ಬೆಸ್ಟ್‌ ಡೇ ಅಂತಲೇ ಹೇಳಬಹುದು. ಪ್ರಪೋಸ್‌ ಡೇ ಎನ್ನುವುದು ಹುಟ್ಟಿಕೊಂಡಿದ್ದು, ಪಾಶ್ಚಿಮಾತ್ಯ ಜಗತ್ತಿನಲ್ಲಿ. ಇದರ ಹುಟ್ಟಿನ ಇತಿಹಾಸದ ಬಗ್ಗೆ ಯಾವುದೇ ಸ್ವಲ್ಪ ದಾಖಲೆಗಳಿಲ್ಲ. ಹಾಗಾದರೆ ಪ್ರಪೋಸ್ ಡೇ ಆಚರಿಸುವ ಉದ್ದೇಶವೇನು...