ಭಾರತ, ಏಪ್ರಿಲ್ 12 -- Priyanka Chopra in Krrish 4: ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಪ್ರಿಯಾಂಕ ಚೋಪ್ರಾ ಹೆಸರು ಬಹಳ ಸದ್ದು ಮಾಡುತ್ತಿದೆ. ಮದುವೆಯ ಬಳಿಕ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಪ್ರಿಯಾಂಕಾ ಇದೀಗ ಮತ್ತೆ ಮಾತೃಭೂಮಿಗೆ ಕಡೆಗೆ ಒಲವು ತೋರಿದಂತಿದೆ. ರಾಜಮೌಳಿ ನಿರ್ದೇಶನದ ಮಹೇಶ್‌ ಬಾಬು ನಟನೆಯ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಪ್ರಿಯಾಂಕಾ ಬಾಲಿವುಡ್‌ಗೂ ಮರಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹೃತಿಕ್ ರೋಷನ್ 'ಕ್ರಿಶ್ 4' ಚಿತ್ರ ನಿರ್ದೇಶನ ಮಾಡಲು ಮುಂದಡಿ ಇಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ ಎಂಬ ಮಾತು ಕೇಳಿ ಬರುತ್ತಿದೆ. ಕ್ರಿಶ್‌ ಹಾಗೂ ಕ್ರಿಶ್‌ 3ನಲ್ಲಿ ಒಟ್ಟಾಗಿ ನಟಿಸಿ ಜನಮೆಚ್ಚುಗೆ ಪಡೆದಿತ್ತು ಈ ಜೋಡಿ. ಇದೀಗ ಮತ್ತೆ ಇವರು ತೆರೆ ಮೇಲೆ ಒಂದಾಗುವ ಸುದ್ದಿ ಹೃತಿಕ್-ಪ್ರಿಯಾಂಕಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದು ಗಾಳಿಸುದ್ದಿಯಾಗದಿರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ಕಳೆದ ಕೆಲವು ವರ್ಷ...