Bangalore, ಮಾರ್ಚ್ 28 -- ಕರ್ನಾಟಕದಲ್ಲಿ ಒಂದು ವರ್ಷದಲ್ಲಿ ದರ ಏರಿಕೆಯಾಗುತ್ತಲೇ ಇದೆ. ಗುರುವಾರ ಒಂದೇ ದಿನ ಕರ್ನಾಟಕದಲ್ಲಿ ಹಾಲು ಹಾಗೂ ವಿದ್ಯುತ್‌ ದರದ ಅಧಿಕೃತ ಘೋಷಣೆ ಮಾಡಲಾಗಿದೆ. ಮೆಟ್ರೋ ದರ ಏರಿಕೆಗೆ ಭಾರೀ ವಿರೋಧ ವ್ಯಕ್ತವಾದರೂ ದರ ನಿರೀಕ್ಷೆಯಷ್ಟು ಇಳಿಕೆಯಾಗಲಿಲ್ಲ. ಸಾರಿಗೆ ಬಸ್‌ ದರವೂ ದುಬಾರಿಯಾಗಿ ಜನ ಅದಕ್ಕೆ ಹೊಂದಿಕೊಂಡಿದ್ದಾರೆ. ಅಬಕಾರಿ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿದ್ದರೂ ಮದ್ಯ ಪ್ರಿಯರಿಂದ ಅಂತಹ ವಿರೋಧ ಎಲ್ಲೂ ಕೇಳಿ ಬಂದಿಲ್ಲ. ಉಳಿದಂತೆ ಆಸ್ತಿ ನೋಂದಣಿ, ಆಸ್ತಿ ತೆರಿಗೆ ಸಹಿತ ಹಲವು ದರಗಳನ್ನು ಏರಿಕೆ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಒಂದು ವರ್ಷದ ಅವಧಿಯಲ್ಲಿ ಎರಡೆರಡು ಬಾರಿ ಹಾಲು ಹಾಗೂ ವಿದ್ಯುತ್‌ ಏರಿಸಿದೆ. ಸದ್ಯದಲ್ಲೇ ನೀರಿನ ದರ ಏರಿಕೆ ಸೂಚನೆಯೂ ಇದೆ. ಬೆಂಗಳೂರಿಗರು ನೀರಿಗೂ ಹೆಚ್ಚಿನ ದರ ತೆರಬೇಕಾಗುತ್ತದೆ. ಏಪ್ರಿಲ್‌ ಒಂದರಿಂದಲೇ ಹೊಸ ತೆರಿಗೆ ಹಾಗೂ ದರಗಳು ಜಾರಿಗೆ ಬರಲಿವೆ. ಒಂದು ವರ್ಷದಲ್ಲಿ ಆಗಿರುವ ದರ ಏರಿಕೆಯ ನೋಟ ಇಲ್ಲಿದೆ.

Published by HT Digital Content Servi...