ಭಾರತ, ಏಪ್ರಿಲ್ 28 -- ಮದುವೆಯಾಗಿ ಒಂದಿಷ್ಟು ತಿಂಗಳು ಕಳೆದಿದ್ದು, ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯೋಚಿಸ್ತಾ ಇದೀರಾ, ಇದಕ್ಕಾಗಿ ಒಂದಿಷ್ಟು ಸಿದ್ಧತೆ ಅವಶ್ಯ. ಮಗು ಹೊಂದಬೇಕು ಎಂದು ಯೋಚಿಸುವ ಮೊದಲು ನೀವು ಆರ್ಥಿಕವಾಗಿ ಸ್ಥಿರವಾಗಿದ್ದೀರಾ, ತಾಯಿಯಾದವಳು ಮಗು ಹೆರಲು ದೈಹಿಕವಾಗಿ ಸಿದ್ಧಳಾಗಿದ್ದಾಳಾ, ಗಂಡ-ಹೆಂಡತಿ ಇಬ್ಬರೂ ಮಗು ಪಡೆಯಲು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎಂಬೆಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಾಗುವುದು ಕಷ್ಟಸಾಧ್ಯವಾಗಿದೆ. ಹಲವರಿಗೆ ಮಕ್ಕಳಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಗು ಮಾಡಿಕೊಳ್ಳುವ ಮೊದಲು ಮಹಿಳೆಯು ತನ್ನ ದೇಹವನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ದೇಹವು ಸಾಕಷ್ಟು ಸದೃಢವಾಗಿಲ್ಲ ಎಂದರೆ ಅಥವಾ ಬಲವಾಗಿಲ್ಲ ಎಂದರೆ ಗರ್ಭಾವಸ್ಥೆಯ ಸಮಯದಲ್ಲಿ ಬೆನ್ನುನೋವು, ಕಾಲುನೋವು, ಸ್ನಾಯುಸೆಳೆತದಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ಸುರಕ್ಷಿತ ಗರ್ಭಧಾರಣೆಗಾಗಿ ನೀವು ನಿಮ್ಮ ದೇಹವನ್ನು ಹೀಗೆ ಸಿದ್ಧಪಡಿ...