ಭಾರತ, ಫೆಬ್ರವರಿ 1 -- ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ, ನಟ ಪ್ರಕಾಶ್‌ ರಾಜ್‌ ಸ್ನಾನ ಮಾಡುತ್ತಿರುವ ಕೃತಕ ಬುದ್ಧಿಮತ್ತೆ ಆಧರಿಸಿ ಸೃಷ್ಟಿಸಿದ ಚಿತ್ರವೊಂದು ವೈರಲ್ ಆಗಿತ್ತು. ಆದರೆ ಪ್ರಕಾಶ್‌ ರಾಜ್ ಕುಂಭಮೇಳದಲ್ಲಿ ಭಾಗವಹಿಸಿರಲಿಲ್ಲ. ಈಗ ಅದೇ ವಿಚಾರವಾಗಿ ಪ್ರಕಾಶ್‌ ರಾಜ್ ತಮ್ಮ ನಕಲಿ ಚಿತ್ರವನ್ನು ಹರಿಬಿಟ್ಟವರ ಮೇಲೆ ದೂರು ದಾಖಲಿಸಿದ್ದಾರೆ. ಈ ಚಿತ್ರವನ್ನು ಮೊದಲು ಹರಿಬಿಟ್ಟ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ. ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐ ಆರ್ ದಾಖಲು ಮಾಡಲಾಗಿದೆ.

ಪ್ರಶಾಂತ ಸಂಬರ್ಗಿ ಪ್ರಖ್ಯಾತರೋ ಕುಖ್ಯಾತರೋ ಗೊತ್ತಿಲ್ಲ ನನಗೆ. ಜನರ ನಂಬಿಕೆಗೆ ಅಘಾತ ಉಂಟು ಮಾಡುತ್ತಿದ್ದಾರೆ. ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ. ಹೀಗಾಗಿ ನಾನು ಪ್ರಶಾಂತ ಸಂಬರ್ಗಿ ವಿರುದ್ಧ ದೂರು ನೀಡಿ ಎಫ್ ಐ ಆರ್ ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾಸತ್ಯತೆ ಎಲ...