ಬೆಂಗಳೂರು, ಮಾರ್ಚ್ 11 -- ಬೆಂಗಳೂರು: ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಬೇರೆ ಸಮಾಜದ ಹುಡುಗಿಯರತ್ತ ಗಮನಹರಿಸಿ ಮದುವೆಯಾಗಿ ಎಂದಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಟ ಪ್ರಕಾಶ್‌ ರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮವೊಂದರಲ್ಲಿ " ಬೇರೆ ಸಮಾಜದವರನ್ನು ಮದುವೆಯಾಗಿ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

"ನಾವು ಮತಾಂತರದ ಬಗ್ಗೆ ಬಹಳಷ್ಟು ಸಮಯದಿಂದ ಮಾತನಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದ ಮೊದಲಿನಿಂದಲೂ ಮಾತನಾಡುತ್ತಿದ್ದೇವೆ. ಮತಾಂತರ ನಡೆಯುತ್ತಿದೆ, ಮತಾಂತರ ನಡೆಯುತ್ತಿದೆ.. ಎಂದು ಇನ್ನೆಷ್ಟು ವರ್ಷ ಮಾತನಾಡುವುದು. ಯಾವಾಗ ಪರ್ವಕಾಲ ಬರುತ್ತದೆಯೋ ಆ ಪರ್ವ ಕಾಲದಲ್ಲಿ ಕೆಲಸ ಚಂದ ಮಾಡಬೇಕು. ಒಂದಿಷ್ಟು ಸವಾಲುಗಳನ್ನು ತೆಗೆದುಕೊಳ್ಳೋಣ. ಮತಾಂತರ ಆಗುತ್ತಿದೆ... ಮತಾಂತರ ಆಗುತ್ತಿದೆ... ಎಂದು ಎಷ್ಟು ದಿನ ಬಡಿದಾಡೋದು... ಘರ್‌ ವಾಪ್ಸಿ ಮಾಡೋದು ಹೇಗೆ ಎಂದು ಮನೆಮನೆಗೆ ಕಲಿಸಿಕೊಡೋಣ ನಾವು" ...