ಭಾರತ, ಮಾರ್ಚ್ 15 -- ಗೆಲ್ಲುವ ಮೊದಲು 'ಜನ ಸೇನಾ', ಗೆದ್ದ ನಂತರ 'ಭಜನ ಸೇನಾʼ ಎಂದು ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ. ಈ ಪವನ್‌ ಕಲ್ಯಾಣ್‌ಗೆ ಟಾಂಗ್‌ ನೀಡಿದ್ದಾರೆ. ಪವನ್‌ ಕಲ್ಯಾಣ್‌ ನೀಡಿರುವ ಎರಡು ವಿರೋಧಾಭಾಸದ ಹೇಳಿಕೆಗಳನ್ನು ಈ ಟ್ವೀಟ್‌ ಜತೆಗ ಪ್ರಕಾಶ್‌ ರಾಜ್‌ ಅಪ್ಲೋಡ್‌ ಮಾಡಿದ್ದಾರೆ. ಹಿಂದೊಮ್ಮೆ ಪವನ್‌ ಕಲ್ಯಾಣ್‌ "ಉತ್ತರ ಭಾರತದ ರಾಜಕೀಯ ನಾಯಕರು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು" ಎಂದು ಈ ಹಿಂದೆ ಟ್ವೀಟ್‌ ಮಾಡಿದ್ದರು. ಇತ್ತೀಚೆಗೆ ಪವನ್‌ ಕಲ್ಯಾಣ್‌ ಅವರ ಟ್ವೀಟ್‌ ಇದಕ್ಕೆ ವಿರುದ್ಧವಾಗಿತ್ತು. ಇದಕ್ಕೆ ಪ್ರಕಾಶ್‌ ರಾಜ್‌ ಅವರು ಗೆಲ್ಲುವ ಮೊದಲು 'ಜನ ಸೇನಾ', ಗೆದ್ದ ನಂತರ 'ಭಜನ ಸೇನಾʼ ಎಂದು ಟಾಂಗ್‌ ನೀಡಿದ್ದಾರೆ.

ಈ ಎಲ್ಲಾ ವಾಕ್ಸಮರ ಇತ್ತೀಚಿನ ಹಿಂದಿ ಹೇರಿಕೆ ಕುರಿತಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರು ದೇವನಾಗರಿ ಲಿಪಿಯ ರೂಪಾಯಿ ಪರಿಚಯಿಸಿದ್ದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಕುರಿತು ಪರ ವಿರೋಧ...