ಭಾರತ, ಏಪ್ರಿಲ್ 9 -- ಉತ್ತರ ಪ್ರದೇಶ ಸಿಎಂ ಭೇಟಿಯಾದ ಪ್ರಭುದೇವ

ನಟ ಪ್ರಭುದೇವ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.

ಪ್ರಭುದೇವ ಅವರು ಯೋಗಿ ಆದಿತ್ಯನಾಥ್ ಅವರಿಗೆ ರಾಮನ ಪ್ರತಿಮೆಯನ್ನು ನೀಡಿ ಗೌರವಿಸಿದರು.

ಪ್ರಭುದೇವ ಮಾತ್ರವಲ್ಲದೆ ನಟ ಮೋಹನ್ ಬಾಬು ಮತ್ತು ಅವರ ಮಗ ವಿಷ್ಣು ಮಂಚು ಕೂಡ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು.

ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಕಣ್ಣಪ್ಪ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ವಿಷ್ಣು ಮಂಚು ಬರೆದಿದ್ದಾರೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರಮೋಷನ್‌ಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.

ಕಣ್ಣಪ್ಪ ಚಿತ್ರದಲ್ಲಿ ಶರತ್‌ಕುಮಾರ್, ಮುಖೇಶ್ ರಿಷಿ, ಬ್ರಹ್ಮಾಜಿ, ಬ್ರಹ್ಮಾನಂದಂ, ಅರ್ಪಿತ್ ರಂಕಾ, ಪ್ರೀತಿ ಮುಕುಂದನ್, ಐಶ್ವರ್ಯ ಭಾಸ್ಕರನ್, ದೇವರಾಜ್, ಸಂಪತ್ ರಾಮ್, ಶಿವ ಬಾಲಾಜಿ ಮುಂತಾದವರು ಇದ್ದಾರೆ.

ಈ ಚಿತ್ರವನ್ನು ಸುಮಾರು 100 ...