ಭಾರತ, ಫೆಬ್ರವರಿ 24 -- ಬೆಂಗಳೂರು : 66/11 ಕೆವಿ ಸುಬ್ರಹ್ಮಣ್ಯಪುರ ಉಪ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಫೆಬ್ರುವರಿ 25ರ ಮಂಗಳವಾರ ವಿದ್ಯುತ್ (Bengaluru Power Cut) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕರೆಂಟ್‌ ಇಲ್ಲದಿರುವ ಕಾರಣದಿಂದ, ಜನರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.

ಗುಬ್ಬಲಾಳ, ಉತ್ತರಹಳ್ಳಿ, ಇಸ್ರೋ ಲೇ ಔಟ್, ಇಂಡಸ್ಟ್ರೀಯಲ್ ಏರಿಯಾ, ಆದರ್ಶ ಅಪಾರ್ಟ್‌ಮೆಂಟ್, 1ನೇ ಮತ್ತು 2ನೇ ಮಂತ್ರಿ ಟ್ರಾಂಕ್ವಿಲ್ ಅಪಾರ್ಟ್‌ಮೆಂಟ್, ಮಾರುತಿ ಲೇ ಔಟ್, ಭಾರತ್ ಲೇ ಔಟ್, ದೊಡ್ಡಕಲ್ಲಸಂದ್ರ ಇಂಡಸ್ಟ್ರಿಯಲ್ ಏರಿಯಾ, ಆಗರ, ಕುಮಾರಸ್ವಾಮಿ ಲೇ ಔಟ್, ವಿಠಲ ನಗರ, ಯದಲಂ ನಗರ, ಮಾರುತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ.

ಕರೆಂಟ್‌ ಸಮಸ್ಯೆ ಆಗುವುದರಿಂದ ಈ ಪ್ರದೇಶಗಳ ಜನರು ನಿತ್ಯದ ಅಗತ್ಯ ಕೆಲಸಗಳನ್ನು ಯೋಜಿಸಿ ...