Bangalore, ಜನವರಿ 29 -- Post Office Schemes: ಭಾರತೀಯ ಅಂಚೆ ಇಲಾಖೆಯು ಹಣ ಉಳಿತಾಯ ಮಾಡಲು ಬಯಸುವವರಿಗೆ ವೈವಿಧ್ಯಮಯ ಯೋಜನೆಗಳನ್ನು ಹೊಂದಿದೆ. ನಿಮ್ಮ ನಿವೃತ್ತಿ ಬದುಕಿಗೆ ಅಥವಾ ನಿಮ್ಮ ಮಗುವಿನ ಶಿಕ್ಷಣಕ್ಕೆ ಅಥವಾ ನಿಮ್ಮ ಹಣಕಾಸು ಸ್ಥಿರತೆಗೆ, ವ್ಯವಹಾರ ಉದ್ದೇಶಕ್ಕೆ ಹಣ ಉಳಿತಾಯ ಮಾಡಲು ಬಯಸಿರಬಹುದು. ಅಂಚೆ ಇಲಾಖೆಯ ಕೆಲವೊಂದು ಹೂಡಿಕೆ, ಉಳಿತಾಯ ಯೋಜನೆಗಳು ಆಕರ್ಷಕ ಬಡ್ಡಿದರ, ತೆರಿಗೆ ಪ್ರಯೋಜನಗಳನ್ನು ಹೊಂದಿದೆ. ಅಂತಹ ಐದು ಯೋಜನೆಗಳ ವಿವರ ಇಲ್ಲಿ ನೀಡಲಾಗಿದೆ.

ನಿಯಮಿತ ಆದಾಯ ಬಯಸುವ ಮಹಿಳೆಯರಿಗೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್‌) ಸೂಕ್ತವಾಗಿದೆ. ಹಣಕಾಸು ಸಚಿವಾಲಯ ಅಂಗೀಕರಿಸಿದ ಈ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಶೇಕಡ 7.4 ಬಡ್ಡಿದರ ದೊರಕುತ್ತದೆ. ಇದಕ್ಕಾಗಿ ನೀವು ಪ್ರತಿತಿಂಗಳು ನಿರ್ದಿಷ್ಟ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕು. ಈ ಯೋಜನೆಗೆ ಸೇರಿದ ಬಳಿಕ ಮೊದಲ ಐದು ವರ್ಷ ಹಣ ತೆಗೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ತಿಂಗಳ ಆದಾಯವನ್ನು ಪ...