Bengaluru, ಮಾರ್ಚ್ 23 -- ಬಾಲಿವುಡ್‌ ನಟ ವರುಣ್ ಧವನ್ ಅವರ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರಕ್ಕೆ ಶನಿವಾರ ಹೃಷಿಕೇಶದಲ್ಲಿ ಚಾಲನೆ ನೀಡಲಾಯಿತು. ಈ ಚಿತ್ರವನ್ನು ವರುಣ್ ಧವನ್ ಅವರ ತಂದೆ ಮತ್ತು ಹಿರಿಯ ಬಾಲಿವುಡ್ ನಿರ್ದೇಶಕ ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ.

ಪೂಜಾ ಹೆಗ್ಡೆ ಮಾತ್ರವಲ್ಲದೆ, ಮತ್ತೋರ್ವ ಬಾಲಿವುಡ್‌ ನಟಿ ಮೃಣಾಲ್ ಠಾಕೂರ್ ಸಹ ನಾಯಕಿಯಾಗಿದ್ದಾರೆ.

2024ರಲ್ಲಿ ನಟಿ ಪೂಜಾ ಹೆಗ್ಡೆ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ ಎಂಬುದಕ್ಕಿಂತ, ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ. ಇದೀಗ 2025ರಲ್ಲಿ ಸಾಲು ಸಾಲು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ.

ಸದ್ಯ ಸೂರ್ಯ ನಟನೆಯ ರೆಟ್ರೋ, ರಜನಿಕಾಂತ್‌ ಜತೆಗೆ ಕೂಲಿ, ಕಾಂಚನ 4, ಜನ ನಾಯಗನ್‌ ಸಿನಿಮಾಗಳಲ್ಲಿ ಪೂಜಾ ನಟಿಸುತ್ತಿದ್ದಾರೆ.

ಇದರ ಜತೆಗೆ ಹಿಂದಿಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾದ ಮುಹೂರ್ತವೂ ಈಗಷ್ಟೇ ನೆರವೇರಿದ್ದು, ಒಟ್ಟಾರೆ ಐದು ಸಿನಿಮಾಗಳಲ್ಲಿ ಪೂಜಾ ಬಿಜಿಯಾಗಿದ್ದಾರೆ. ಈ ಐದರಲ್ಲಿ 3 ಸಿನಿಮಾ...