Bangalore, ಮಾರ್ಚ್ 7 -- OTT release date: ಬಾಸಿಲ್ ಜೋಸೆಫ್, ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ನಟನೆಯ ಪೊನ್ಮನ್‌ ಸಿನಿಮಾ ಮುಂದಿನ ವಾರ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಮಲಯಾಳಂ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಹೀಗಾಗಿ, ಇದು ಒಟಿಟಿಯಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಪೊನ್ಮನ್‌ ಸಿನಿಮಾವನ್ನು ಆನ್‌ಲೈನ್‌ನಲ್ಲಿ ನೋಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ಬಾಸಿಲ್ ಜೋಸೆಫ್ ಅವರ ಪೊನ್ಮನ್ ಶೀಘ್ರದಲ್ಲೇ ಜಿಯೋಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಬೆಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಚಿತ್ರ ಜನವರಿ 30, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸುಮಾರು ಒಂದೂವರೆ ತಿಂಗಳ ಬಳಿಕ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲು ಸಜ್ಜಾಗಿದೆ. ಈ ಚಿತ್ರವು ಇದೇ ಮಾರ್ಚ್‌ 14ರಂದು ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಜಿಯೋಹಾಟ್‌ಸ್ಟಾರ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಧ...