ಭಾರತ, ಜನವರಿ 31 -- ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಗುರುವಾರ ಭಾರತೀಯ ನೌಕಾ ನೌಕಾಪಡೆಯ ಹಡಗು (ಐಎನ್‌ಎಸ್‌ವಿ) ತಾರಿಣಿಯಲ್ಲಿ ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳವಾದ ಪಾಯಿಂಟ್ ನೆಮೊವನ್ನು ದಾಟುವ ಮೂಲಕ ಹೊಸ ಸಾಹಸ ಮಾಡಿದ್ದಾರೆ. ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ ಎಂಬ ಇಬ್ಬರ ಸಾಹಸಕ್ಕೆ ಜಗತ್ತೇ ಬೆರಗಾಗಿದೆ. ನ್ಯೂಜಿಲೆಂಡ್‌ನ ಲಿಟ್ಟೆಲ್ಟನ್‌ನಿಂದ ಫಾಕ್‌ಲ್ಯಾಂಡ್ ದ್ವೀಪಗಳ ಪೋರ್ಟ್ ಸ್ಟಾನ್ಲಿಗೆ ತಮ್ಮ ಮೂರನೇ ಹಂತದ ಪ್ರಯಾಣದ ಸಮಯದಲ್ಲಿ ಇವರು ಪಾಯಿಂಟ್‌ ನೆಮೊ ಎಂಬ ಭೂಮಿಯ ಅತ್ಯಂತ ದೂರದ ಸ್ಥಳವನ್ನು ಹಾದು ಹೋಗಿದ್ದಾರೆ. ದಕ್ಷಿಣ ಪೆಸಿಫಿಕ್‌ನಲ್ಲಿರುವ ಪಾಯಿಂಟ್ ನೆಮೊ ಎನ್ನುವುದು "ಯಾರೂ ಪ್ರವೇಶಿಸಲಾಗದ ಸಾಗರ ಧ್ರುವ" ಎಂದೇ ಖ್ಯಾತಿ ಪಡೆದಿದೆ. ಇದು ಭೂಮಿಯ ಅತ್ಯಂತ ದೂರದ ಸ್ಥಳವಾಗಿದೆ. ಹತ್ತಿರದ ಭೂಪ್ರದೇಶದಿಂದ ಈ ಪಾಯಿಂಟ್‌ ನೆಮೊ ಸುಮಾರು 2,688 ಕಿಲೋಮೀಟರ್ ದೂರದಲ್ಲಿದೆ.

ನಾವಿಕ ಸಾಗರ ಪರಿಕ್ರಮ II ಕಾರ್ಯಾಚರಣೆಯ ಭಾಗವಾಗಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸ...