Delhi, ಫೆಬ್ರವರಿ 24 -- Pm Kisan 2025: ಭಾರತದಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತ ಸಮ್ಮಾನ್ ಯೋಜನೆಯ 19 ನೇ ಕಂತನ್ನು ಬಿಹಾರದಲ್ಲಿ ಬಿಡುಗಡೆ ಮಾಡಿದರು.ಒಟ್ಟು 19 ನೇ ಕಂತಿನ 21,500 ಕೋಟಿ ರೂ. ಬಿಡುಗಡೆಯಾಗಿದ್ದು 9.7 ಕೋಟಿ ರೈತರಿಗೆ ಹಣ ಖಾತೆಗಳಿಗೆ ವರ್ಗಾವಣೆಯಾಗಲಿದೆ. ವರ್ಷಕ್ಕೆ ಮೂರು ಬಾರಿ ತಲಾ ಎರಡು ಸಾವಿರ ರೂ.ಗಳಂತೆ ಒಟ್ಟು 6000 ಸಾವಿರ ರೂ.ಗಳನ್ನು ಅರ್ಹ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ಹಣ ವರ್ಗಾವಣೆ ಚಾಲನೆ ನೀಡಿರುವುದರಿಂದ ನೇರವಾಗಿ ಖಾತೆಗಳಿಗೆ ಹಣ ಬರುವುದರಿಂದ ಬ್ಯಾಂಕ್‌ಗಳಲ್ಲಿ ಪರಿಶೀಲಿಸಿಕೊಳ್ಳಬಹುದು.

ಈ ಯೋಜನೆಯು ಎಲ್ಲಾ ಭೂ ಹಿಡುವಳಿದಾರ ರೈತರ ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಗುರಿಯೊಂದಿಗೆ ಆರಂಭಗೊಂಡಿದೆ. ಇದು ಸರಿಯಾದ ಬೆಳೆ ಆರೋಗ್ಯ ಮತ್ತು ಸೂಕ್ತ ಇಳುವರಿಯನ್ನು ಖಚಿತಪಡಿಸಿಕೊಳ್ಳಲು, ನಿರೀಕ್ಷಿತ ಕ...