ಭಾರತ, ಜನವರಿ 3 -- ಪ್ರೊ ಕಬಡ್ಡಿ ಲೀಗ್‌ನ (Pro Kabaddi League 2023) ಬುಧವಾರದ (ಜನವರಿ 03) ಪಂದ್ಯದಲ್ಲಿ ಎರಡು ರೋಚಕ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ (Jaipur Pink Panthers) ಜಯ ಸಾಧಿಸಿದರೆ, ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಪುಣೇರಿ ಪಲ್ಟಾನ್ಸ್‌ ತಂಡವು 31-40 ಅಂತರದಿಂದ ಗೆದ್ದು ಬೀಗಿತು.

ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಹರಿಯಾಣ ಸ್ಟೀಲರ್ಸ್ ತಂಡದ ವಿರುದ್ಧ 45-34 ಅಂಕಗಳ ಅಂತರದಿಂದ ಜಯ ಸಾಧಿಸಿತು. ಅರ್ಜುನ್ ದೇಶ್ವಾಲ್ ರೈಡಿಂಗ್‌ ತಂಡದ ಕೈ ಹಿಡಿಯಿತು. ಭರ್ಜರಿ 14 ಪಾಯಿಂಟ್ ಕಲೆ ಹಾಕಿದ ಅವರು ಸೂಪರ್‌ 10 ಪೂರ್ಣಗೊಳಿಸಿದರು. ಇದೇ ವೇಳೆ ಟ್ಯಾಕಲ್‌ನಲ್ಲಿ ಮಿಂಚಿದ ರೆಜಾ ಮಿರ್ಬಘೇರಿ 7 ಪಾಯಿಂಟ್ ಕಲೆ ಹಾಕಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಅಂಕುಶ್ 5 ಟ್ಯಾಕಲ್ ಪಾಯಿಂಟ್ ಪಡೆದರು.

ಹರಿಯಾಣ ಸ್ಟೀಲರ್ಸ್ ಉತ್ತಮ ಪ್ರತಿರೋಧ ಒಡ್ಡಿತು. ತಂಡದ ಪರ ಚಂದ್ರನ್ ರಂಜಿತ್ 11 ರೈಡ್ ಪಾಯಿಂಟ್ ...