ಭಾರತ, ಏಪ್ರಿಲ್ 28 -- ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸಾಮಾನ್ಯವಾಗಿ ಮನುಷ್ಯನ ಗುಣಲಕ್ಷಣಗಳು ಹಾಗೂ ವ್ಯಕ್ತಿತ್ವದ ಮೇಲೆ ವಿಶಿಷ್ಟವಾದ ದೃಷ್ಟಿಕೋನವನ್ನು ಹೊಂದಿರುತ್ತವೆ. ಇವುಗಳು ನಮ್ಮ ವ್ಯಕ್ತಿತ್ವವನ್ನು ತಿಳಿಸುವುದು ಸುಳ್ಳಲ್ಲ. ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೀವು ಸ್ವಯಂ ವಿಮರ್ಶೆ ಹೊಂದಿರುವವರೋ ಅಲ್ಲವೋ ಎಂಬುದನ್ನು ತಿಳಿಸುತ್ತದೆ. ನಿಮಗೆ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯುವ ಆಸೆ ಇದ್ದರೆ ನೀವು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ, ನಿಮಗೆ ಏನು ಮೊದಲು ಕಾಣಿಸಿತು ನೋಡಿ.

ಇಲ್ಲಿರುವ ಚಿತ್ರದಲ್ಲಿ ಕಾಗೆಯೊಂದು ಕಲ್ಲನ್ನು ಬಾಯಲ್ಲಿ ಹಿಡಿದಿರುವುದನ್ನ ಕಾಣಬಹುದು. ಜೊತೆಗೆ ಕಲ್ಲುಗಳಿಂದಲೇ ನಿರ್ಮಾಣವಾದ ಮನುಷ್ಯನ ಮುಖ ಕೂಡ ಕಾಣಿಸುತ್ತದೆ.

ಈಗ ನಿಮ್ಮ ವ್ಯಕ್ತಿತ್ವವನ್ನು ನೀವು ತಿಳಿಯಬೇಕು ಎಂದರೆ ಮೊದಲು ನಿಮಗೆ ಕಾಣಿಸಿದ್ದೇನು ಎಂಬುದನ್ನು ಒಪ್ಪಿಕೊಳ್ಳಬೇಕು. ಇದನ್ನು ನೀವು ನೋಡಿ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳುವುದು ಮಾತ್ರವಲ್ಲ, ನಿಮ್ಮ ಆತ್ಮೀಯರಿಗೂ ಕಳುಹಿಸಿ ಅವರ ವ್ಯಕ್ತಿತ...