Maharashtra, ಮಾರ್ಚ್ 29 -- ಪುಣೆ: ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ನವಿಲುಗಳೇ ನವಿಲುಗಳು( Peacock). ನವಿಲುಗಳ ಸಹಜ ಓಡಾಟ, ಸಂಸಾರ. ಮನೆ, ಅಂಗಡಿ, ರಸ್ತೆ, ಕಟ್ಟಡಗಳ ಆಜೂಬಾಜು ಎಲ್ಲಿ ನೋಡಿದರೂ ನವಿಲುಗಳು ಬದುಕು ಕಟ್ಟಿಕೊಂಡಿವೆ. ಇದು ಈಗಿನದ್ದೇನಲ್ಲ. ಸತತ 11 ತಲೆಮಾರುಗಳಿಂದ ಇಲ್ಲಿ ನವಿಲುಗಳು ಈ ಗ್ರಾಮದೊಂದಿಗೆ ನಂಟು ಬೆಳೆಸಿಕೊಂಡಿವೆ. ಈಗಲೂ ಊರಿನ ಜನ ನವಿಲುಗಳನ್ನು ತಮ್ಮ ಮನೆಯ ಮಕ್ಕಳಂತೆಯೇ ಜನತದಿಂದ ಕಾಪಾಡಿಕೊಳ್ಳುತ್ತಾರೆ. ಅವುಗಳಿಗೆ ಆಹಾರ, ಮೊಟ್ಟೆಗಳ ಪೋಷಣೆ, ಅನಾರೋಗ್ಯಕ್ಕೆ ಒಳಗಾದರೆ ಚಿಕಿತ್ಸೆ ಸಹಿತ ಎಲ್ಲವನ್ನೂ ಪ್ರೀತಿಯಿಂದಲೇ ಮಾಡುತ್ತಾರೆ. ರಾಷ್ಟ್ರೀಯ ಪಕ್ಷಿ ನವಿಲಿಗೆ ಇಲ್ಲಿ ಎಲ್ಲಿಲ್ಲದ ಗೌರವ. ಈ ಕಾರಣದಿಂದಲೇ ಈ ಗ್ರಾಮದ ಬರೀ ಮಹಾರಾಷ್ಟ್ರ ಮಾತ್ರವಲ್ಲ. ಇಡೀ ವಿಶ್ವದ ಗಮನ ಸೆಳೆದಿದೆ. ದೂರದ ದೇಶಗಳಿಂದಲೂ ಗ್ರಾಮಕ್ಕೆ ಆಗಮಿಸಿ ನವಿಲುಗಳನ್ನು ನೋಡಿಕೊಂಡು ಖುಷಿಯಿಂದಲೇ ಹೋಗುತ್ತಾರೆ.

ಇದನ್ನೂ ಓದಿರಿ: Interesting News:ಬೇಸಿಗೆಯಲ್ಲಿ ಚೇಳು ಕಡಿದಾಗ ತುರ್ತಾಗಿ ಏನು ಮಾಡಬೇಕು, ಪ್ರಥಮ ಚಿಕಿತ್ಸೆ ಹೇಗೆ...