Bengaluru, ಫೆಬ್ರವರಿ 19 -- ಮಕ್ಕಳು ತಮ್ಮ ಹೆತ್ತವರ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಅನುಕರಿಸುತ್ತಾರೆ ಮತ್ತು ಅವುಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುತ್ತಾರೆ. ಪೋಷಕರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ, ಕೆಲಸದವರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಆಹಾರ ಅಭ್ಯಾಸ, ಸ್ಕ್ರೀನ್ ಸಮಯ ಮತ್ತು ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾರೆ ಇವೆಲ್ಲವೂ ಮಕ್ಕಳು ತಮ್ಮ ತಂದೆ ತಾಯಿಗಳಿಂದ ಕಲಿಯುವ ಮತ್ತು ಅನುಸರಿಸುವ ಅಭ್ಯಾಸಗಳಿಗೆ ಕೆಲವೊಂದು ಉದಾಹರಣೆಗಳು.

ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಓದಿರಿ, ಆರೋಗ್ಯಕರವಾಗಿರುವುದನ್ನು ತಿನ್ನಿರಿ, ಶ್ರಮವಹಿಸಿ ಕೆಲಸ ಮಾಡಿ, ಜವಾಬ್ದಾರಿಯುತರಾಗಿರಿ ಎಂದು ಹೇಳುತ್ತಾರೆ. ಆದರೆ ಅದರಲ್ಲಿ ಎಷ್ಟೋ ಜನ ತಮ್ಮ ಜೀವನದಲ್ಲಿ ಅದನ್ನು ಪಾಲಿಸುವುದೇ ಇಲ್ಲ. ನಿಮಗೆ ಗೊತ್ತಾ, ಮಕ್ಕಳು ಕೇಳಿ ಅರಿತುಕೊಳ್ಳುವುದಕ್ಕಿಂತಲೂ, ತಮ್ಮ ಸುತ್ತ ಮುತ್ತ ನಡೆಯುವುದನ್ನು ನೋಡಿ ಕಲಿಯುವುದೇ ಹೆಚ್ಚು. ಸುತ್ತ ಮುತ್ತಲಿನವರಿಗಿಂತ ಹೆಚ್ಚಾಗಿ ತಮ್ಮ ಪೋಷಕರು ಏನನ್ನು ಮಾಡುತ್ತಾರೆ, ಏನನ್ನು ತಿ...