Bengaluru, ಜನವರಿ 27 -- Parenting: ಮಕ್ಕಳು ಇಷ್ಟಪಟ್ಟಿದ್ದನ್ನು ತಂದುಕೊಟ್ಟ ಮಾತ್ರಕ್ಕೆ ಅದನ್ನು ಉತ್ತಮ ಪೋಷಕರ ಲಕ್ಷಣ ಅಂತಾ ಹೇಳಲು ಆಗುವುದಿಲ್ಲ. ಮಕ್ಕಳ ಇಷ್ಟ ಕಷ್ಟಗಳಿಗೆ ಆದ್ಯತೆ ನೀಡುವುದರ ಜೊತೆಯಲ್ಲಿ ಅವರ ಗುಣ, ವರ್ತನೆ ಹಾಗೂ ನಡತೆಯನ್ನು ಸರಿಪಡಿಸುವ ಜವಾಬ್ದಾರಿ ಕೂಡ ಪೋಷಕರ ಮೇಲೆ ಇರುತ್ತದೆ. ನಿಮ್ಮ ಮಗು ಕೆಟ್ಟ ಮನಸ್ಥಿತಿಯನ್ನು ಹೊರ ಹಾಕಿದಾಗ ಅದರ ಬಗ್ಗೆ ನಿರ್ಲಕ್ಷ್ಯವನ್ನು ತೋರದೇ ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ಪೋಷಕರಾಗಿ ನೀವು ಯೋಚಿಸಬೇಕಿದೆ. ಮಗುವಿನ ಗುಣ ನಡತೆಗಳನ್ನು ಸರಿಪಡಿಸಲು ನೀವು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ

ಮಕ್ಕಳು ತಮ್ಮ ಪೋಷಕರ ಗಮನವನ್ನು ಸೆಳೆಯುವ ಸಲುವಾಗಿ ನಕರಾತ್ಮಕವಾಗಿ ವರ್ತಿಸುತ್ತಾರೆ. ಪ್ರತಿಯೊಂದರ ಬಗ್ಗೆಯೂ ದೂರುವುದನ್ನು ನಿಮ್ಮ ಮಗು ಮಾಡುತ್ತಿದ್ದರೆ ಇದಕ್ಕೆ ನೀವು ನಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡುವುದರ ಬದಲು ಆ ಸಮಸ್ಯೆಗಳನ್ನು ಆದಷ್ಟು ಶಾಂತವಾಗಿ ಹಾಗೂ ನಯವಾಗಿ ಪರಿಹರಿಸುವುದರ ಬಗ್ಗೆ ನೀವು ಯೋಚಿಸಬೇಕು. ಒಂದು ವೇಳೆ ಮಗು ಊಟ ಚೆನ್ನಾಗಿ...