Bengaluru, ಮಾರ್ಚ್ 19 -- ಮಕ್ಕಳು ಬೆಳೆದಂತೆಲ್ಲಾ ಪೋಷಕರ ಜವಾಬ್ದಾರಿ ಹೆಚ್ಚುತ್ತಾ ಹೋಗುತ್ತದೆ. ಅವರಿಗೆ ಸರಿ-ತಪ್ಪುಗಳನ್ನು ಕಲಿಸಿ, ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಅವರ ಮೇಲಿರುತ್ತದೆ. ಮಗುವಿಗೆ ಅಚ್ಚುಕಟ್ಟಾಗಿ ಊಟ ಮಾಡುವುದನ್ನು ಹೇಳಿಕೊಡುವುದರಿಂದ ಹಿಡಿದು ಸ್ನಾನ, ನಿದ್ದೆ, ಸ್ವಚ್ಛತೆ ಮುಂತಾದ ಶಿಸ್ತನ್ನು ರೂಢಿಸುವ ಕೆಲಸ ಪೋಷಕರದ್ದಾಗಿರುತ್ತದೆ. ಮಕ್ಕಳು ಚಿಕ್ಕವರಿದ್ದಾಗ ತಂದೆ-ತಾಯಿಯೊಂದಿಗೆ ಮಲಗುವುದು ಸಹಜ. ಆದರೆ ಮಕ್ಕಳು 8-10 ವರ್ಷವಾಗುತ್ತಿದ್ದಂತೆ ಅವರನ್ನು ಪ್ರತ್ಯೇಕವಾಗಿ ಮಲಗುವ ಅಭ್ಯಾಸವನ್ನು ರೂಢಿಸುವುದು ಪೋಷಕರ ಜವಾಬ್ದಾರಿಗಳಲ್ಲಿ ಒಂದಾಗುತ್ತದೆ.

ಕೆಲವು ಮಕ್ಕಳು ತಮ್ಮ ತಾಯಿಯೊಂದಿಗೆ ಮಲಗಲು ಇಷ್ಟಪಡುತ್ತಾರೆ. ಪ್ರತ್ಯೇಕವಾಗಿ ಮಲಗಲು ಬಯಸುವುದಿಲ್ಲ. ಒಂಟಿಯಾಗಿ ಮಲಗಲು ಹೇಳಿದಾಗಲೆಲ್ಲ ನನಗೆ ಭಯವಾಗುತ್ತದೆ ಎನ್ನುವುದು ಸಾಮಾನ್ಯ ಸಂಗತಿ. ಎಲ್ಲಾ ಪ್ರಯತ್ನ, ತಿಳುವಳಿಕೆ ಹೇಳಿದ ನಂತರವೂ ಅವರು ತಮ್ಮ ಪೋಷಕರೊಂದಿಗೆ ಮಲಗುವುದಾಗಿಯೇ ಹಟ ಹಿಡಿಯುತ್ತಾರೆ. ನೀವು ನಿಮ್ಮ ಮಕ್ಕಳಿ...