ಭಾರತ, ಜನವರಿ 27 -- ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು, ಉತ್ತರ ಅಂಕಗಳಿಸಿ ಹೊರ ಬರುವ ಮಕ್ಕಳು ಜೀವನದ ಸಣ್ಣ ಸವಾಲುಗಳನ್ನು ಎದುರಿಸಲು ಅಸಮರ್ಥರಾಗುತ್ತಿರುವ ಸುದ್ದಿಗಳು ಹೆಚ್ಚುತ್ತಿವೆ. ಪ್ರಾಯೋಗಿಕ ಜ್ಞಾನದ ಕೊರತೆಯಿಂದಾಗಿ ಹಲವರಿಗೆ ಜೀವನ ಮತ್ತು ಸಂಬಂಧಗಳಲ್ಲಿ ಸಾಮರಸ್ಯವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮಗುವಿನ ವ್ಯಕ್ತಿತ್ವ ಬೆಳವಣಿಗೆಗೆ ಪೋಷಕರ ರಕ್ಷಣಾತ್ಮಕ ಜಾಲದ ಅಗತ್ಯವಿರುತ್ತದೆ ಎಂಬುದು ನಿಜ, ಆದರೆ ಅದಕ್ಕೆ ಮಿತಿಯೂ ಇದೆ ಎಂಬುದನ್ನು ಮರೆಯುವಂತಿಲ್ಲ. ಅತಿಯಾದ ಪ್ರೀತಿ ಮತ್ತು ರಕ್ಷಣೆ ಮಕ್ಕಳನ್ನು ಹಾಳು ಮಾಡುತ್ತದೆ. ಅದು ಅವರ ವ್ಯಕ್ತಿತ್ವಕ್ಕೆ ಅಡ್ಡಿಯಾಗುತ್ತದೆ. ಇದರ ಬಗ್ಗೆ ಮನಶ್ಶಾಸ್ತ್ರಜ್ಞರು ಮತ್ತು ಅಧ್ಯಯನಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ಮಕ್ಕಳ ಮೇಲೆ ಅತಿಯಾದ ರಕ್ಷಣಾತ್ಮಕ ಮನೋಭಾವ ಹೊಂದಿರುವ ಪೋಷಕರ ವರ್ತನೆಯನ್ನು ಹೆಲಿಕಾಪ್ಟರ್ ಪೇರೆಂಟಿಂಗ್‌ ಎಂದು ಕರೆಯಲಾಗುತ್ತದೆ. ಇದರರ್ಥ ಪೋಷಕರು ತಮ್ಮ ಮಕ್ಕಳು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಯಾವುದ...