Bengaluru, ಜನವರಿ 30 -- ಮಕ್ಕಳನ್ನು ಹೆರುವುದು ಕಷ್ಟವಲ್ಲ, ಆದರೆ ಅವರನ್ನು ಬೆಳೆಸುವುದು ನಿಜಕ್ಕೂ ತುಂಬಾ ಕಷ್ಟದ ಕೆಲಸ ಎಂಬ ಮಾತಿದೆ. ಅದು ಹೌದು ಕೂಡ.. ಯಾಕೆಂದರೆ ಮಕ್ಕಳು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ಜಾಸ್ತಿ ನೋಡಿ ಕಲಿಯುತ್ತವೆ. ಹೀಗಾಗಿ ಅವರ ದೈಹಿಕ ಬೆಳವಣಿಗೆಯ ಜತೆಗೇ, ಮಾನಸಿಕ ಬೆಳವಣಿಗೆಯೂ ಪಾಲಕರು ಆದ್ಯತೆ ಕೊಡಬೇಕು. ಯಾಕೆಂದರೆ ತಂದೆ-ತಾಯಿಯ ಕೆಲವೊಂದು ಕೆಟ್ಟ ಅಭ್ಯಾಸಗಳು, ಹವ್ಯಾಸಗಳು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅಂತಹ ಅಭ್ಯಾಸಗಳ ಕುರಿತು ಪಾಲಕರಿಗೇ ಅರಿವಿರುವುದಿಲ್ಲ, ಆದರೆ ಅವುಗಳನ್ನು ಮಕ್ಕಳು ಬೇಗನೇ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅ ಕಾಲದ ಚಿತ್ರಣ ಅವರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಪಾಲಕರು ಮಕ್ಕಳ ಬಾಲ್ಯದಲ್ಲಿ ಮಾಡುವ ಅಂತಹ ತಪ್ಪುಗಳನ್ನು ಅರಿತುಕೊಂಡರೆ, ಅದರಿಂದ ಮಗುವಿನ ಭವಿಷ್ಯದ ಮೇಲೆ ಬೀರಬಹುದಾದ ಪರಿಣಾಮವನ್ನು ತಪ್ಪಿಸಬಹುದು.

ನಾವು ಬಹಳ ಸ್ಟ್ರಿಕ್ಟ್ ಎಂದು ಹಲವು ಮಂದಿ ಪಾಲಕರು ಹೇಳಿಕೊಳ್ಳುತ್ತಿರುತ್ತಾರೆ. ಅಂದರೆ ನಾವು ಮಕ...