Bengaluru, ಫೆಬ್ರವರಿ 1 -- ಮಕ್ಕಳ ಲಾಲನೆ ಪಾಲನೆ ಪಾಲಕರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ. ಅವರ ಬೇಕು ಬೇಡಗಳನ್ನು ಗಮನಿಸುವ ಜತೆಗೇ, ಅವರ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಮಹ್ವತದ ಜವಾಬ್ದಾರಿಯೂ ಪಾಲಕರ ಮೇಲಿರುತ್ತದೆ. ಮಕ್ಕಳನ್ನು ಕೆಲವು ಪಾಲಕರು ಪ್ರೀತಿಯಿಂದ ಅತಿಯಾದ ಮುದ್ದಿನಿಂದ ಬೆಳೆಸಿದರೆ, ಮತ್ತೆ ಕೆಲವರು ಶಿಸ್ತಿನಿಂದ ಬೆಳೆಸುತ್ತಾರೆ. ಏನೇ ಆದರೂ ಪಾಲಕರ ಪ್ರೀತಿ ಮತ್ತು ಕಾಳಜಿ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದು. ಅತಿಯಾದ ಪ್ರೀತಿಯೂ ಒಳ್ಳೆಯದಲ್ಲ, ಹಾಗೆಯೇ ಅತಿಯಾದ ಶಿಸ್ತು ಮತ್ತು ಕಟ್ಟುನಿಟ್ಟು ಕೂಡ ಮಕ್ಕಳಿಗೆ ಸಮಸ್ಯೆ ಉಂಟುಮಾಡಬಹುದು. ಮಕ್ಕಳ ದೈಹಿಕ ಬೆಳವಣಿಗೆ ಹೇಗೆ ಮುಖ್ಯವೋ, ಮಾನಸಿಕ ಬೆಳವಣಿಗೆಯೂ ಅಷ್ಟೇ ಮುಖ್ಯ. ಎರಡೂ ಸರ್ವತೋಮುಖ ಬೆಳವಣಿಗೆಯಾದರೆ ಮಾತ್ರ ಮಗು ಸಂತೋಷದಿಂದ ಇರಬಹುದು. ಅದರಲ್ಲಿ ವ್ಯತ್ಯಾಸವಾದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳಾಗಿ, ನಿಮಗೆ ಹೆಮ್ಮೆ ತರುವಂತೆ ಬೆಳೆಸಲು ಇಲ್ಲಿದೆ ಕೆಲವು ಟಿಪ್ಸ್..

ಮಕ್ಕಳು ಸ್ಮಾರ್ಟ್‌ಫೋನ್, ಟ್ಯಾಬ್ಲ...