ಭಾರತ, ಫೆಬ್ರವರಿ 14 -- ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅಥವಾ ಹಾನಿಗೊಳಿಸುವಲ್ಲಿ ಸ್ನೇಹಿತರ ಜೊತೆಗೆ, ಅದರ ಪೋಷಕರು ಸಹ ಮಹತ್ವದ ಪಾತ್ರ ವಹಿಸುತ್ತಾರೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಮತ್ತು ನೀತಿಗಳನ್ನು ತುಂಬುವವರು ಪೋಷಕರು. ಕೆಲವು ಸಂದರ್ಭಗಳಲ್ಲಿ, ಪೋಷಕರ ನಿರ್ಲಕ್ಷ್ಯ ಅಥವಾ ಅಜ್ಞಾನವು ಮಗುವಿನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ, ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ಪರಿಣಾಮವಾಗಿ, ಅವರು ತಮ್ಮ ಜೀವನದುದ್ದಕ್ಕೂ ಸೋಮಾರಿಗಳಂತೆ ವರ್ತಿಸುತ್ತಾರೆ. ಪೋಷಕರು ಮಾಡುವ ಕೆಲವು ಸಣ್ಣ ತಪ್ಪುಗಳು ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಮಕ್ಕಳೊಂದಿಗೆ ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿದ್ದಷ್ಟೂ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂಬುದನ್ನು ಮರೆಯದಿರಿ.

ಅನೇಕ ಪೋಷಕರು ತಮ್ಮ ಮಕ್ಕಳನ್ನು ಬಹಳ ಜಾಗರೂಕತೆಯಿಂದ ಮತ್ತು ಅಸ್ಥೆಯಿಂದ ಸಾಕಿ ಸಲಹುತ್ತಾರೆ. ಶಾಲಾ ಕೆಲಸದಿಂದ ಹಿಡಿದು ಆಟಗಳವರೆಗ...