ಭಾರತ, ಏಪ್ರಿಲ್ 28 -- ವಿಪೇರೆಂಟಿಂಗ್‌ ಒಂದು ಸುಂದರ ಪಯಣ ಎನ್ನುವುದು ಎಷ್ಟು ನಿಜವೂ ಎಷ್ಟೇ ಕಲಿಕೆ ಹಾಗೂ ಬೆಳವಣಿಗೆಯಿಂದ ತುಂಬಿದ ಸಾಹಸಮಯ ಪ್ರಯಾಣವಾಗಿದೆ. ಇದು ಪೋಷಕರು ಹಾಗೂ ಮಕ್ಕಳು ಇಬ್ಬರಿಗೂ ಸವಾಲಿನ ಸಮಯ. ಪೋಷಕರು ಮಕ್ಕಳ ಪ್ರತಿ ವಿಷಯದ ಮೇಲೂ ಗಮನ ಹರಿಸಬೇಕು. ಮಕ್ಕಳಿಗೆ ಹೇಳುವ ವಿಚಾರದಲ್ಲಿ ಅವರಿಂದ ಕೇಳಿಸಕೊಳ್ಳುವ ವಿಚಾರದ ಮೇಲೂ ಪೋಷಕರು ನಿಗಾ ವಹಿಸಬೇಕು. ಆತ್ಮವಿಶ್ವಾಸ, ತಿಳುವಳಿಕೆ ಹಾಗೂ ಪ್ರೀತಿ ಬೆಳೆಸಲು ಮಕ್ಕಳು ಹೆಚ್ಚಾಗಿ ಕೇಳಲು ಬಯಸುವ 6 ವಿಚಾರಗಳು ಇಲ್ಲಿವೆ.

ಮಕ್ಕಳು ತಾವು ಹೇಗಿದ್ದಾರೋ ಅದೇ ರೀತಿಯಲ್ಲಿ ಪೋಷಕರು ತಮ್ಮನ್ನು ಒಪ್ಪಿಕೊಳ್ಳಬೇಕು ಹಾಗೂ ಪ್ರೀತಿಸಬೇಕು ಎಂದು ಬಯಸುತ್ತಾರೆ. ನಿಮಗೆ ಅವರು ಅನನ್ಯ ಮತ್ತು ವಿಶೇಷ ಎಂದು ಅವರಿಗೆ ಭರವಸೆ ನೀಡಿ. ಅವರು ನಿಮಗೆ ಹೊಂದಿಕೊಳ್ಳುವ ಸಲುವಾಗಿ ಬೇರೊಬ್ಬರಂತೆ ನಟಿಸಬೇಕಾಗಿಲ್ಲ ಎಂದು ಅವರಿಗೆ ತಿಳಿಸಿ. ಅವರ ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿ. ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಚಮತ್ಕಾರಗಳಿಗೆ ಪ್ರೋತ್ಸಾಹ ನೀಡಿ. ಪೋಷಕರು ಈ ರೀತಿಯ ವರ್ತನೆ ಹಾಗೂ...