Bengaluru, ಫೆಬ್ರವರಿ 1 -- ಭಾರತದ ವಿಶೇಷ ಖಾದ್ಯಗಳ ಸಾಲಿನಲ್ಲಿ ಪನೀರ್‌ಗೆ ಯಾವತ್ತೂ ಸ್ಥಾನವಿರುತ್ತದೆ. ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳು ಇಷ್ಟಪಟ್ಟು ತಿನ್ನುವ ಪನೀರ್‌ನಿಂದ ಹತ್ತು ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಪನೀರ್ ತಿಂದರೆ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ, ಅಗತ್ಯ ಪೋಷಕಾಂಶಗಳು ಕೂಡ ದೊರಕುತ್ತವೆ. ಹೀಗಾಗಿ ವೈದ್ಯರು ಕೂಡ ಡಯೆಟ್‌ ಪ್ಲ್ಯಾನ್‌ನಲ್ಲಿ ಪನೀರ್ ಇರಲಿ ಎಂದು ಹೇಳುತ್ತಾರೆ. ಹಾಲಿನಿಂದ ತಯಾರಾಗುವ ಪನೀರ್ ಅನ್ನು ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಚೀಸ್‌ನಂತೆ ಬಿಸಿಮಾಡಿದಾಗ ಪನೀರ್ ಕರಗುವುದಿಲ್ಲ. ಹೀಗಾಗಿ ಪನೀರ್ ಅನ್ನು ಗ್ರಿಲ್ ಐಟಂಗಳಲ್ಲಿ, ಫ್ರೈ ಮಾಡಿ, ಅಥವಾ ವಿವಿಧ ಕರಿ ತಯಾರಿಸಲು ಬಳಸುತ್ತಾರೆ. ಹೋಟೆಲ್‌ಗಳಲ್ಲಿ ಸಸ್ಯಾಹಾರಿ ಮೆನುವಿನಲ್ಲಿ ಪನೀರ್ ಸದಾ ಮೊದಲ ಸ್ಥಾನದಲ್ಲಿರುತ್ತದೆ. ಬಹುಬೇಡಿಕೆಯ ಪನೀರ್ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರೊಟೀನ್, ಕ್ಯಾಲ್ಸಿಯಂ ಕೂಡ ದೊರೆಯುತ್ತದೆ.

ರಿಸರ್ಚ್‌ ಗೇಟ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಪ್ರತಿ 100 ಗ್ರಾಂ ಪನೀರ್‌ನಲ್ಲಿ ಪ್ರೊ...