ಭಾರತ, ಮಾರ್ಚ್ 10 -- ಹಸ್ತಸಾಮುದ್ರಿಕಾ ಶಾಸ್ತ್ರವು ಜ್ಯೋತಿಷ್ಯದ ಒಂದು ಪ್ರಕಾರವಾಗಿದೆ. ನಮ್ಮ ಕೈಯಲ್ಲಿ ಮೂಡಿರುವ ಪ್ರತಿ ರೇಖೆಗಳು ನಮ್ಮ ಭೂತ, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಹೇಳುತ್ತವೆ. ಹಸ್ತದಲ್ಲಿ ಬಾಗಿದ ರೇಖೆಗಳು ಕೆಲವು ಅರ್ಧ ಹಸ್ತಗಳ ಮೇಲೆ ಇಂಗ್ಲಿಷ್ ಚಿಹ್ನೆಯ ಆಕಾರದಲ್ಲಿರುತ್ತವೆ. ಇವು ನಮ್ಮ ಭವಿಷ್ಯವನ್ನು ತಿಳಿಸುತ್ತವೆ. ಅಂಗೈಯಲ್ಲಿ ಇಂಗ್ಲಿಷ್‌ ಅಕ್ಷರ J ಯಿಂದ N ವರೆಗೆ ರೂಪುಗೊಂಡಿದ್ದರೆ ಇದರ ಅರ್ಥ ಏನು ಎನ್ನುವುದರ ವಿವರ ಇಲ್ಲಿದೆ.

ಅಂಗೈಯಲ್ಲಿ J ಗುರುತು ಇರುವ ಜನರು ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಬಲಗೈಯಲ್ಲಿ ಈ ಗುರುತು ಇರುವುದು ತಾಯಿಗೆ ನೋವನ್ನುಂಟು ಮಾಡುತ್ತದೆ. ಈ ಗುರುತು ಎಡಗೈಯಲ್ಲಿದ್ದರೆ, ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆಯಿದೆ. ಮಹಿಳೆಯರ ಕೈಯಲ್ಲಿ ಈ ಗುರುತು ಇದ್ದರೆ, ಗರ್ಭಾವಸ್ಥೆಯಲ್ಲಿ ಅವರು ಜಾಗರೂಕರಾಗಿರಬೇಕು.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ K ಚಿಹ್ನೆಯನ್ನು ದುರದೃಷ್ಟ...