Pakistan, ಮಾರ್ಚ್ 11 -- Pak train hijack: ಪಾಕಿಸ್ತಾನದಲ್ಲಿ ಉಗ್ರರ ಚಟುವಟಿಕೆ ನಿರಂತರವಾಗಿ ಮುಂದುವರಿದಿರುವ ನಡುವೆಯೇ ಪ್ರಯಾಣಿಕರಿದ್ದ ರೈಲನ್ನೇ ಅಪಹರಿಸಿ ಒತ್ತೆಯಾಳಾಗಿ ಪ್ರಯಾಣಿಕರನ್ನು ಇಟ್ಟುಕೊಂಡಿರುವ ಘಟನೆ ನಡೆದಿದೆ.ಬಲೂಚೀಸ್ತಾನ್‌ನ ಬಂಡುಕೋರರ ಗುಂಪು 450 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಪ್ರತ್ಯೇಕ ಪ್ರಾಂತಕ್ಕಾಗಿ ಪಾಕಿಸ್ತಾನ ಪ್ಯಾಸೆಂಜರ್ ರೈಲು ಅಪಹರಿಸಲಾಗಿದೆ. ಮಾತುಕತೆ ನಂತರ ಹಿರಿಯರು, ಮಹಿಳೆಯರು ಹಾಗೂ ಮಕ್ಕಳನ್ನು ರೈಲಿನಿಂದ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ಹಲವು ಪ್ರಯಾಣಿಕರು ರೈಲಿನಲ್ಲಿಯೇ ಸಿಲುಕಿಕೊಂಡಿದ್ದಾರೆ. ಪಾಕಿಸ್ತಾನಿ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು ಕೊಲ್ಲಲಾಗುತ್ತದೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ವಕ್ತಾರ ಜೀಯಂಡ್ ಬಲೂಚ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ರಕ್ಷಣಾ ಚಟುವಟಿಕೆಗೆ ಇಳಿದ ಸಿಬ್ಬಂದಿಗಳನ್ನು ಕೊಂದಿರುವ ಮಾಹಿತಿಯೂ ಲಭ್ಯವಾಗಿದೆ. ಪಾಕಿಸ್ತಾನದಲ್ಲಿ ರೈಲಿನ ನಿಯಂತ್ರಣವನ್ನು ತೆಗೆದ...