Bengaluru, ಜನವರಿ 26 -- Padma Awards 2025: ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಘೋಷಣೆಯಾಗಿದೆ. ಈ ಬೆನ್ನಲ್ಲೇ ಕರುನಾಡಿನ ಸಿನಿಮಾ ಪ್ರೇಮಿಗಳು, ಅವರ ಅಭಿಮಾನಿಗಳು ಈ ಪ್ರಶಸ್ತಿ ಘೋಷಣೆ ಆಗಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ. ಪರಭಾಷೆಯ ಕಲಾವಿದರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಶಸ್ತಿ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅನಂತ್‌ ನಾಗ್‌, "ಇದು ಕನ್ನಡಿಗರ ಪ್ರಯತ್ನದಿಂದ ಸಾಧ್ಯವಾಗಿದೆ. ನನಗೆ ಪದ್ಮಭೂಷಣ ಪ್ರಶಸ್ತಿ ಬರಬೇಕು ಎಂದು ಕನ್ನಡಿಗರು ಆಸೆ ಪಟ್ಟಿದ್ದರು. ಅಭಿಯಾನ ನಡೆಸಿದ್ದರು. ಆ ಅಭಿಯಾನಕ್ಕೆ ಈಗ ಯಶಸ್ಸು ಸಿಕ್ಕಿದೆ. ಕನ್ನಡಿಗರ ಖುಷಿಯೇ ನನ್ನ ಖುಷಿ" ಎಂದಿದ್ದರು ಅನಂತ್‌‌ ನಾಗ್.

ಈಗ ಇದೇ ಅನಂತ್‌ ನಾಗ್‌ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಘೋಷಣೆ ಆಗುತ್ತಿದ್ದಂತೆ, ಖ್ಯಾತ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.

ಇದನ...