Dakshina kannada, ಜನವರಿ 26 -- ಈ ಬಾರಿ ಪದ್ಮ ಪ್ರಶಸ್ತಿ ಕನ್ನಡದ ಒಂಬತ್ತು ಮಂದಿಗೆ ಬಂದಿದೆ. ಅರ್ಹರಿಗೆ ಪ್ರಶಸ್ತಿ ಲಭಿಸಿರುವ ಖುಷಿಯಂತೂ ಇದೆ. ಆದರೆ ಇನ್ನೂ ಅರ್ಹರಿದ್ದರು ಅವರನ್ನೂ ಪರಿಗಣಿಸಬೇಕಿತ್ತು ಎನ್ನುವ ಚರ್ಚೆಗಳೂ ನಡೆದಿವೆ. ಅದರಲ್ಲೂ ಕರಾವಳಿ ಭಾಗದವರಾಗಿ ಯಕ್ಷಗಾನ ಕಲೆಗೆ ಜೀವತುಂಬಿ ಅದಕ್ಕೊಂದು ಘನತೆ ತಂದುಕೊಟ್ಟಂತಹ ಕಲಾವಿದರೂ ಇದ್ದರು. ಅವರನ್ನು ಗುರುತಿಸಬೇಕಿತ್ತು. ಕನ್ನಡಿಗರು ಇಂತಹ ಕಲಾವಿದರ ಪರವಾಗಿ ನಿಲ್ಲುವ, ಸೂಕ್ತ ವೇದಿಕೆಯಲ್ಲಿ ಇಂತವರ ಕುರಿತು ಅಭಿಪ್ರಾಯ ಮೂಡಿಸುವ ಮೂಲಕ ಪದ್ಮ ಪ್ರಶಸ್ತಿ ಸಿಗುವಂತೆ ಮಾಡಬೇಕು ಎನ್ನುವ ಗಂಭೀರ ಸಲಹೆಯೂ ಕೇಳಿಬಂದಿದೆ. ಹೀಗಾದರೆ ಮಾತ್ರ ಸಾಧಕ ಕನ್ನಡಿಗರನ್ನು ಗುರುತಿಸಲು ಸಾಧ್ಯವಾಗಬಹುದು ಎನ್ನುವುದು ಚರ್ಚೆಯ ಮುಖ್ಯಸಾರ.

ಪ್ರತೀ ಬಾರಿ ಪದ್ಮ ಪ್ರಶಸ್ತಿಗಳ ಘೋಷಣೆ ಆದಾಗಲೂ ನಾನು ತುಂಬ ಆಸೆಯಿಂದ ಪಟ್ಟಿಯ ಮೇಲೆ ಕಣ್ಣಾಡಿಸುತ್ತೇನೆ - ನಮ್ಮ ಗೋವಿಂದ ಮಾವನ ಹೆಸರು ಉಂಟಾ ಅಂತ... ಮತ್ತೆ ಮತ್ತೆ ನಿರಾಸೆ....

ಯಕ್ಷಗಾನ ಕಂಡ ಅದ್ವಿತೀಯ ಕಲಾವಿದ, ಯಕ್ಷರಂಗದ ದಶಾವತಾರಿ, ತಮ...