ಭಾರತ, ಫೆಬ್ರವರಿ 9 -- ಪ್ಯಾಡೆಡ್‌ ಬ್ರಾಗಳು ಫ್ಯಾಷನ್ ಟ್ರೆಂಡ್‌ನ ಭಾಗವಾಗಿದ್ದರೂ ಅವುಗಳನ್ನು ಧರಿಸುವುದರಿಂದ ಆರಾಮದಾಯಕ ಭಾವನೆ ಮೂಡುತ್ತದೆ, ಮಾತ್ರವಲ್ಲ ಇದು ಆಕಾರ ಸುಧಾರಿಸಲು ನೆರವಾಗುತ್ತದೆ. ಸ್ತನದ ಗಾತ್ರ ಚಿಕ್ಕ ಇರುವವರು ಹೆಚ್ಚಾಗಿ ಇದನ್ನು ಧರಿಸಲು ಬಯಸುತ್ತಾರೆ. ಆದಾಗ್ಯೂ ಇವುಗಳನ್ನು ಧರಿಸುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ ತಜ್ಞರು.

ಪ್ಯಾಡೆಡ್‌ ಬ್ರಾಗಳನ್ನು ಸ್ತನಗಳು ಆಕರ್ಷಕವಾಗಿ ಕಾಣುವ ಸಲುವಾಗಿ ಹಾಗೂ ಸ್ತನಗಳಿಗೆ ವಿಶೇಷ ಆಕಾರ ನೀಡುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬ್ರಾಗಳನ್ನು ಸಾಮಾನ್ಯವಾಗಿ ಪ್ಯಾಡ್‌ಗಳಿಂದ ತಯಾರಿಸಲಾಗುತ್ತದೆ. ಸಾಮಾನ್ಯ ಬ್ರಾಗಳಿಗೆ ಹೋಲಿಸಿದರೆ ಇವುಗಳಿಗೆ ಬೆಲೆಯೂ ಕೊಂಚ ಹೆಚ್ಚು. ಇವು ಸ್ತನದ ಭಾಗವನ್ನು ಎತ್ತಿ ಆಕಾರವನ್ನು ಹೆಚ್ಚು ಆಕರ್ಷಕವಾಗಿಸಲು ಸಹಾಯ ಮಾಡುತ್ತವೆ.

ಆಕಾರವನ್ನು ಸುಧಾರಿಸುವುದು: ಪ್ಯಾಡೆಡ್ ಬ್ರಾಗಳನ್ನು ಬಳಸುವುದರಿಂದ ದೇಹವು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ...