Bengaluru, ಫೆಬ್ರವರಿ 12 -- ವಿಮಾನಯಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯಿಂದಾಗಿ ಜನಸಾಮಾನ್ಯರಿಗೂ ವಿಮಾನ ಪ್ರಯಾಣ ಸುಲಭ ದರದಲ್ಲಿ ಲಭ್ಯವಾಗುವಂತಾಗಿದೆ. ಭಾರತದಲ್ಲಿ ಉಡಾನ್ ಯೋಜನೆ, ಕಡಿಮೆ ದರದಲ್ಲಿ ಟಿಕೆಟ್ ಲಭ್ಯತೆ, ವಿಮಾನಯಾನ ಸಂಸ್ಥೆಗಳ ಪೈಪೋಟಿಯಿಂದಾಗಿ ಜನಸಾಮಾನ್ಯರು ವಿಮಾನ ಪ್ರಯಾಣದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರ ಕೂಡ ಹೆಚ್ಚಿನ ವಿಮಾನ ನಿಲ್ದಾಣಗಳ ಸ್ಥಾಪನೆ ಮಾಡಿರುವುದು ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.

ವಿಮಾನಯಾನ ಮಾರ್ಗ ಮತ್ತು ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ, ಕೆಲವೊಂದು ಅಚ್ಚರಿಯ ಸಂಗತಿಗಳು ನಿಮಗೆ ತಿಳಿದಿರುತ್ತವೆ. ಜತೆಗೆ, ಕೆಲವೊಂದು ನಿರ್ಬಂಧಗಳ ಬಗೆಗೂ ನೀವು ಕಂಡುಕೊಂಡಿರುತ್ತೀರಿ. ಅದರಂತೆ, ಇಡೀ ಪೆಸಿಫಿಕ್ ಮಹಾಸಾಗರದ ಮೇಲೆ ಹಾರುವ ವಿಮಾನಗಳು ಬಹಳ ಕಡಿಮೆ. ವಾಸ್ತವವಾಗಿ, ಆ ಪ್ರದೇಶದ ಮೂಲಕ ಸಾಗಬೇಕಾದ ಸಂದರ್ಭದಲ್ಲಿ, ವಿಮಾನಯಾನ ಸಂಸ್ಥೆಗಳು ಬದಲಿ ಮಾರ್ಗದ ಮೊರೆ ಹೋಗುತ್ತಾರೆ, ಅಂದರೆ, ಸಮೀಪದ ಮಾರ್ಗದ ಬದ...