Bengaluru, ಮಾರ್ಚ್ 9 -- OTT Weekend Watch: ಮತ್ತೊಂದು ವಾರಾಂತ್ಯ ಬಂದಾಯ್ತು. ಒಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಪೈಕಿ ಟಾಪ್‌ ರೇಟಿಂಗ್‌ ಪಡೆದು, ಚಿತ್ರಮಂದಿರಗಳಲ್ಲಿ ಹಿಟ್‌ ಆಗಿ, ಒಟಿಟಿ ಪ್ರಿಯರನ್ನು ಸೆಳೆದ ಸಿನಿಮಾಗಳು ಯಾವವು? ಇಲ್ಲಿವೆ ಈ ವಾರ ಬಿಡುಗಡೆಯಾದ ಮತ್ತು ನೋಡಲೇಬೇಕಾದ ಟಾಪ್‌ 9 ಸಿನಿಮಾಗಳ ವಿವರ.

ಹಿಂದಿ, ಮಲಯಾಳಂ, ತೆಲುಗು, ತಮಿಳು ಸೇರಿ ಕನ್ನಡದ ಸಿನಿಮಾಗಳೂ ಈ ವಾರ ಒಟಿಟಿ ಅಂಗಳ ಪ್ರವೇಶಿಸಿವೆ. ತಾಂಡೇಲ್‌, ರೇಖಾಚಿತ್ರಂ, ರಾಯಲ್‌, ಬಾಪು ಸೇರಿ ಇನ್ನೂ ಹಲವು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಈ ವಾರ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಜಿಯೋ ಹಾಟ್‌ಸ್ಟಾರ್‌, ಜೀ5 ಮತ್ತು ಸೋನಿ ಲಿವ್‌ ಒಟಿಟಿಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಿವೆ.

ದಿನಕರ್‌ ತೂಗುದೀಪ ನಿರ್ದೇಶನದ ರಾಯಲ್‌ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಸದ್ದಿಲ್ಲದೆ, ಸ್ಟ್ರೀಮಿಂಗ್‌ ಆರಂಭಿಸಿದೆ. ಜನವರಿಯಲ್ಲಿ ಬಿಡುಗಡೆಯಾದ ಈ ಸಿನಿಮಾ 40 ದಿನಗಳ ಬಳಿಕ ಒಟಿಟಿಗೆ ಆಗಮಿಸಿದೆ. ಜಯಣ್ಣ ಭೋಗೇಂದ್ರ ನಿರ್ಮಾ...