Hyerabad, ಫೆಬ್ರವರಿ 11 -- ಒಟಿಟಿ ರೊಮ್ಯಾಂಟಿಕ್ ಕಾಮಿಡಿ: ಒಟಿಟಿಯಲ್ಲಿ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ ಬರುತ್ತಿದೆ. ಈ ಸರಣಿಗೆ ಲವ್ ಅಂಡರ್ ಕನ್ಸ್ಟ್ರಕ್ಷನ್ ಎಂದು ಹೆಸರಿಡಲಾಗಿದೆ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗಿದೆ. ನೀರಜ್ ಮಾಧವ್, ಅಜು ವರ್ಗೀಸ್ ಮತ್ತು ಗೌರಿ ಜಿ ಕಿಶನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯು ಹೊಸ ಮನೆ ಮತ್ತು ಪ್ರೇಯಸಿಯ ನಡುವೆ ಸಿಕ್ಕಿಬಿದ್ದು ಒದ್ದಾಡುವ ಯುವಕನೊಬ್ಬನ ಕಥೆಯಾಗಿದೆ.

ಲವ್ ಅಂಡರ್ ಕನ್ಸ್ಟ್ರಕ್ಷನ್ ವೆಬ್ ಸರಣಿಯನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಕೆಲವು ವರ್ಷಗಳ ಹಿಂದೆಯೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿತ್ತು. ಇದು ಪ್ರೇಮಿಗಳ ದಿನದಂದು ಬರುವ ನಿರೀಕ್ಷೆಯೂ ಇತ್ತು. ಆದರೆ, ಇನ್ನೂ ತಡವಾಗಿ ಎರಡು ವಾರಗಳ ನಂತರ ಫೆಬ್ರವರಿ 28ರಿಂದ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೆಬ್ ಸರಣಿಯ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಒಬ್ಬ ಯುವಕ ಗಲ್ಪ್‌ಗೆ ಹೋಗಿ ಹಣ ಸಂಪಾದನೆ ಮಾ...