Bengaluru, ಮಾರ್ಚ್ 23 -- ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ, ಸೋನಿ ಲಿವ್‌ ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಮಲಯಾಳಂ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಆ ಟಾಪ್‌ 5 ಸಿನಿಮಾಗಳ ವಿವರ ಹೀಗಿದೆ.

ಆಫೀಸರ್ ಆನ್ ಡ್ಯೂಟಿ: ಆಫೀಸರ್ ಆನ್ ಡ್ಯೂಟಿ ಸಿನಿಮಾವನ್ನು ನಿರ್ದೇಶಕ ಜಿತು ಅಶ್ರಫ್ ನಿರ್ದೇಶಿಸಿದ್ದಾರೆ. ದಕ್ಷ ಪೊಲೀಸ್‌ ಆಫೀಸರ್‌ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು. ಸದ್ಯ ಈ ಸಿನಿಮಾ ಒಟಿಟಿಯಲ್ಲಿಯೂ ಮೋಡಿ ಮಾಡುತ್ತಿದೆ. ಕುಂಚಾಕೋ ಬೋಬನ್‌ ಮುಖ್ಯಭೂಮಿಕೆಯಲ್ಲಿನ ಈ ಸಿನಿಮಾ ನೆಟ್‌ಫ್ಲಿಕ್ಸ್‌ ಟ್ರೆಂಡಿಂಗ್‌ನಲ್ಲಿದೆ.

ರೇಖಾಚಿತ್ರಂ: ಜೋಫಿನ್ ಟಿ ಚಾಕೊ ನಿರ್ದೇಶಿಸಿದ ಸಿನಿಮಾ ರೇಖಾಚಿತ್ರಂ. ಆಸಿಫ್ ಅಲಿ, ಅನಸ್ವರ ರಾಜನ್ ನಟಿಸಿದ ಈ ಸಿನಿಮಾ ಮಾಡಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದ್ದು, ಇನ್ನೂ ಟ್ರೆಂಡಿಂಗ್‌ನಲ್ಲಿದೆ.

ನಾರಾಯಣಂಟೆ ಮೂನ್ನನ್ಮಕ್ಕಲ್: ಜೊಜು ಜಾರ್ಜ್‌, ಸೂರಜ್‌ ವೆಂಜ್ರಮೂಡು ಮುಖ್ಯಭೂಮಿಕೆಯಲ್ಲಿರುವ, ಶರಣ್ ವೇಣುಗೋಪಾಲ್ ನಿ...