ಭಾರತ, ಮಾರ್ಚ್ 10 -- ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ ಮಾತ್ರವಲ್ಲದೆ ಜೀ5, ಜಿಯಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಸೋನಿಲಿವ್‌ ಇತ್ಯಾದಿ ಒಟಿಟಿಗಳಲ್ಲಿಯೂ ಸಾಕಷ್ಟು ಜನರು ಸಿನಿಮಾ ವೆಬ್‌ಸರಣಿಗಳನ್ನು ನೋಡುತ್ತಾರೆ. ಇಂತಹ ಒಟಿಟಿಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಹತ್ತು ಸಿನಿಮಾಗಳು ಯಾವುವು ಎಂದು ನೋಡೋಣ. ಇದು ಹಲವು ಒಟಿಟಿಗಳನ್ನು ಒಳಗೊಂಡಿರುವ ಒಟಿಟಿ ಪ್ಲೇ ಆಧರಿತ ವರದಿ. ಈ ಪಟ್ಟಿಯಲ್ಲಿ ಇತ್ತಿಚೇಗೆ ಬಿಡುಗಡೆಗೊಡ ಮಲಯಾಳಂ ಸಿನಿಮಾ ರೇಖಾಚಿತ್ರಂ ನಂಬರ್‌ ಒನ್‌ ಸ್ಥಾನದಲ್ಲಿದೆ. ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಅಗ್ರ ಏಳನೇ ಸ್ಥಾನದಲ್ಲಿದೆ.

ಮಲಯಾಳಂ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಮಾರ್ಚ್ 6ರಂದು ಸೋನಿ ಲೈವ್ ಒಟಿಟಿಗೆ ಬಂದಿದೆ. ಈ ಚಿತ್ರ ಈಗ ಒಟಿಟಿ ಪ್ಲೇನಲ್ಲಿ ಟ್ರೆಂಡಿಂಗ್‌ನಲ್ಲಿ ನಂಬರ್‌ಒನ್‌ ಸ್ಥಾನದಲ್ಲಿದೆ. ಮೂಲ ಮಲಯಾಳಂ ಜತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದದ ಈ ಸಿನಿಮಾದಲ್ಲಿ ಎಐ ಮೂಲಕ ಯಂಗ್‌ ಮಮ್ಮುಟ್ಟಿಯನ್ನು ತೋರಿಸಲಾ...